Sunday, March 23, 2025

ಅಂದು ‘ದಿ ಕೇರಳ ಸ್ಟೋರಿ’ಯನ್ನು ಟೀಕಿಸಿದ ಅತುಲ್ಯ ಅಶೋಕನ್‌ಗೆ ಇದೀಗ ಪತಿಯಿಂದ ಬೆದರಿಕೆ – ವೈರಲ್ ಆಗುತ್ತಿದೆ ಆಕೆಯ ಇನ್ಸ್ಟಾ‌ಗ್ರಾಮ್ ಸ್ಟೋರಿ

ಕೇರಳ ಸ್ಟೋರಿ ಚಿತ್ರದ ವಿರುದ್ಧ ತೀವ್ರವಾಗಿ ಟೀಕಿಸಿದ ಅತುಲ್ಯ ಅಶೋಕನ್, ರಿಸಾಲ್ ಮನ್ಸೂರ್ ಎಂಬ ವ್ಯಕ್ತಿಯನ್ನು ವಿವಾಹವಾಗಿದ್ದಳು. ಏಪ್ರಿಲ್‌ನಲ್ಲಿ ಮದುವೆಯಾಗಿದ್ದ ಈಕೆ ಈಗ ಗಂಡನಿಂದ ಬೆದರಿಕೆ ಇದೆ ಎಂದು ಆರೋಪಿಸಿದ್ದಾಳೆ‌. ಆಕೆಯ Instagram story ಸಂಚಲನ ಸೃಷ್ಟಿಸಿದೆ.

ಕೇರಳದ ಕೊಚ್ಚಿಯ ಅತುಲ್ಯ ಅಶೋಕನ್ ಕೇರಳ‌ ಮಾತ್ರವಲ್ಲದೆ ದೇಶದಾದ್ಯಂತ ಸುದ್ದಿಯಾದವರು. 2023ರ ಏಪ್ರಿಲ್‌ನಲ್ಲಿ ರಿಸಾಲ್ ಮನ್ಸೂರ್ ಎಂಬ ಮುಸ್ಲಿಂ ವ್ಯಕ್ತಿಯನ್ನು ವಿವಾಹವಾದರು ಮತ್ತು ಆಲಿಯಾಳಾಗಿ ಮತಾಂತರಗೊಂಡರು ಎಂದು ಆನ್‌ಲೈನ್‌ನಲ್ಲಿ ಆಘಾತಕಾರಿ ಬಹಿರಂಗಪಡಿಸಿದ್ದಾರೆ.

ಆದರೆ ಈಗ ತನ್ನ ಜೀವಕ್ಕೆ ಬೆದರಿಕೆಯನ್ನು ಸೂಚಿಸುವ ಸಂಬಂಧಿತ ಸ್ಟೋರಿಯೊಂದನ್ನು ಇನ್ಸ್ಟಾ‌ದಲ್ಲಿ ಪೋಸ್ಟ್ ಮಾಡಿದ್ದು ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ‘ತನಗೆ ಏನಾದರೂ ಸಂಭವಿಸಿದರೆ ತನ್ನ ಪತಿಯೇ ಹೊಣೆಗಾರನೆಂದು ಹೇಳಿಕೊಂಡಿದ್ದಾರೆ. ಇನ್‌ಸ್ಟಾ ಸ್ಟೋರಿಯಲ್ಲಿ, ಅತುಲ್ಯ ಅಲಿಯಾಸ್ ಆಲಿಯಾ ತನ್ನ ಪತಿಯನ್ನು ಟ್ಯಾಗ್ ಮಾಡುತ್ತಾ ಹೀಗೆ ಬರೆದಿದ್ದಾರೆ: “ನನಗೆ ಏನೇ ಆಗಲಿ, ನನ್ನ ಕುಟುಂಬದಲ್ಲಿ ಯಾರೂ ಜವಾಬ್ದಾರರಲ್ಲ. ಅವರು ಮಾತ್ರ @marz___12 (ರಿಸಾಲ್ ಮನ್ಸೂರ್).” ಎಂದು ಬರೆದುಕೊಂಡಿದ್ದಾರೆ.

ಈ ಸ್ಟೋರಿ ಸಖತ್ ಸೇನ್ಸೇಷನ್ ಸೃಷ್ಟಿಸಿದೆ. ಈ ಬಗ್ಗೆ ಫ್ರೀ ಪ್ರೆಸ್ ಜರ್ನಲ್ ವರದಿ ಪ್ರಕಟಿಸಿದೆ.

ಅತುಲ್ಯಾಳ ಕೆಲವು ಸಕ್ರಿಯ ಫೋಲೋವಾರ್ಸ್‌ಗಳು ಈ ಸ್ಟೋರಿಯನ್ನು ಗುರುತಿಸುವಲ್ಲಿ ಮತ್ತು ಅದನ್ನು ಸ್ಕ್ರೀನ್‌ಶಾಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ‌. ನಂತರ ಅದನ್ನು ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರ ಮಾಡಿದ್ದಾರೆ.

ಆ ಮೂಲಕ ಕೇರಳ ಸ್ಟೋರಿ ಸಿನೆಮಾ ಮತ್ತೆ ಪ್ರಚಲಿತಕ್ಕೆ ಬಂದಿದೆ‌. ಕೆಲವು ಎಕ್ಸ್ ಖಾತೆದಾರರು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ‌.

ಇನ್ನು ಆಕೆ ಗಂಡನೊಂದಿಗಿರುವ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾಗಿಯೂ ತಿಳಿದು ಬಂದಿದೆ‌.

Related Articles

Latest Articles