Saturday, January 25, 2025

ದಕ್ಷಿಣ ಕನ್ನಡ: ನಾಲ್ಕು ಕಾಲಿನ ಕೋಳಿ ನೋಡಿದ್ದೀರಾ..?

ಸುಳ್ಯದ ಗಾಂಧಿನಗರ ಹೈವೇ ಚಿಕನ್‌ ಸ್ಟಾಲ್‌ವೊಂದರಲ್ಲಿ ನಾಲ್ಕು ಕಾಲುಗಳಿರುವ ಕೋಳಿಯೊಂದು ಕಂಡು ಬಂದ ಅಚ್ಚರಿಯ ಘಟನೆ ನಡೆದಿದೆ.

ಚಿಕನ್‌ ಸ್ಟಾಲ್‌ನಲ್ಲಿ ಮಾರಾಟಕ್ಕೆ ಬಂದಿರುವ ಕೋಳಿಗಳಲ್ಲಿ ಈ ವಿಚಿತ್ರ ಬೆಳಕಿಗೆ ಬಂದಿದೆ. ಮೈಸೂರಿನಿಂದ ಶೀತಲ್‌ ಚಿಕನ್‌ ಸೆಂಟರಿನಿಂದ ತಂದಿರುವ ಕೋಳಿಗಳಲ್ಲಿ ಒಂದು ಕೋಳಿಯಲ್ಲಿ ಈ ವೈಶಿಷ್ಟ್ಯ ಬೆಳಕಿಗೆ ಬಂದಿದೆ. ಕೋಳಿಯ ಕಾಲು ಒಂದೇ ರೀತಿಯಾಗಿದ್ದು, ಯಾವುದೇ ತೊಂದರೆಯಿಲ್ಲ ಎನ್ನಲಾಗಿದೆ.

ಕೋಳಿಯನ್ನು ಅಂಗಡಿಯವರು ಮಾರಾಟ ಮಾಡಿಲ್ಲ. ಈ ವಿಷಯ ಎಲ್ಲೆಡೆ ಹಬ್ಬಿದ ನಂತರ ಇದೀಗ ಸ್ಥಳೀಯರು ಈ ವಿಶೇಷ ಕೋಳಿಯನ್ನು ನೋಡಲು ಚಿಕನ್‌ ಅಂಗಡಿಗೆ ಬರುತ್ತಿದ್ದಾರೆ ಎನ್ನಲಾಗಿದೆ.

Related Articles

Latest Articles