ಸಾಮಾಜಿಕ ಮಾಧ್ಯಮ ದೈತ್ಯ ಫೇಸ್ಬುಕ್ ಭಾರತ ಸೇರಿ ವಿಶ್ವದ್ಯಾಂತ ಸರ್ವರ್ ಡೌನ್ ಆಗಿದ್ದು, ಲಕ್ಷಾಂತರ ಬಳಕೆದಾರರು ತಮ್ಮ ಖಾತೆಗಳನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ.
ಪ್ರಪಂಚದಾದ್ಯಂತದ ಬಳಕೆದಾರರು ತಮ್ಮ ಫೇಸ್ಬುಕ್ ಪ್ರೊಫೈಲ್ಗಳನ್ನು ಲಾಗ್ ಇನ್ ಮಾಡುವಲ್ಲಿ ಮತ್ತು ಪ್ರವೇಶಿಸುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ.
ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಸೇರಿದಂತೆ ಕಂಪನಿಯ ಒಡೆತನದ ಇತರ ಸೇವೆಗಳಲ್ಲಿ ಸಮಸ್ಯೆಗಳನ್ನ ವರದಿ ಮಾಡಿದ್ದಾರೆ.
ಇನ್ನು ಕೆಲವೊಂದು ವೆಬ್ ಸೈಟ್‌ಗಳನ್ನೂ ತೆರೆಯಲು ಸಾಧ್ಯವಾಗುತ್ತಿಲ್ಲ.