ಸರಿಗಮಪ ಸೀಸನ್ 19ರ ಪೋರಿ ದಿಯಾ ಹೆಗ್ಡೆ ಪ್ರತಿಭೆಗೆ ತಲೆದೂಗದವರೇ ಇಲ್ಲ. ಈ ಪುಟಾಣಿ ಹಾಡು, ಡ್ಯಾನ್ಸ್ ಪ್ರೆಸೆಂಟ್ ಮಾಡುವ ರೀತಿ ನಿಜಕ್ಕೂ ಅದ್ಭುತ.
ಕ್ಯೂಟ್ ದಿಯಾಗೆ ಹಿರಿಯರು – ಕಿರಿಯರು ಇದ್ಯಾವ ಮಿತಿಯೇ ಇಲ್ಲದೇ ಅಪಾರ ಅಭಿಮಾನಿ ಬಳಗ ಇದೆ. ತನ್ನ ಪ್ರತಿಭೆ ಮೂಲಕ ಮನರಂಜನೆ ನೀಡ್ತಿದ್ದಾಳೆ ಪುಟ್ಟ ಪೋರಿ.
ಸದ್ಯ ದಿಯಾ ಹೆಗ್ಡೆ ಜನಪ್ರಿಯ ಹಿಂದಿಯ ‘ಇಂಡಿಯನ್ ಐಡಲ್ 14 ಗ್ರ್ಯಾಂಡ್ ಫಿನಾಲೆ’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸೋನಿ ಟಿವಿಯ ‘ಸೂಪರ್ ಸ್ಟಾರ್ ಸಿಂಗರ್ 3’ ರಿಯಾಲಿಟಿ ಶೋನಲ್ಲಿಯೂ ದಿಯಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ.
ಇದೇ ಮಾರ್ಚ್ 9ರಿಂದ ಈ ಶೋ ಪ್ರಸಾರ ಆಗಲಿದೆ. ‘ಇಂಡಿಯನ್ ಐಡಲ್’ ಶೋನಲ್ಲಿ ವಿಶಾಲ್ ದದ್ಲಾನಿ, ಕುಮಾರ್ ಸಾನು, ಶ್ರೇಯಾ ಘೋಷಾಲ್ ಅವರು ಜಡ್ಜ್ ಆಗಿದ್ದಾರೆ. ಇನ್ನು ನೇಹಾ ಕಕ್ಕರ್, ಸೋನು ನಿಗಮ್ ಅವರು ಈ ಶೋಗೆ ಅತಿಥಿಯಾಗಿ ಬಂದಿದ್ದು, ದಿಯಾ ಗಾಯನವನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ.