ಲೋಕದ ಎಲ್ಲಾ ಸುಖಗಳು ಐಶ್ವರ್ಯ ಸಂಪತ್ತು ತಾನೊಬ್ಬನಿಗೆ ದಕ್ಕಬೇಕು ಎನ್ನುವ ಈಕಾಲದಲ್ಲಿ ತಾನು ಬದುಕಿದಷ್ಟು ದಿನ ಬಡವರ ಪಾಲಿಗೆ ಆಸರೆಯಾಗಬೇಕೆಂಬ ದೃಷ್ಟಿಯಿಂದ ಇಂದು ಅನೇಕರ ಬಾಳಿಗೆ ಬೆಳಕಾಗಿ ನಿಂತವರು ಡಾ.ಎಂ.ವಿ ಸದಾಶಿವ.
ಇವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚನಬಲೆ ಗ್ರಾಮದ ವೆಂಕಟರಮಣ ಮೂರ್ತಿ ಹಾಗು ವೆಂಕಟಲಕ್ಷ್ಮಮ್ಮ ದಂಪತಿಗಳ ಪುತ್ರ.
ಅತಿ ಕಡುಬಡತನದಲ್ಲಿಯೇ ಜನಿಸಿದ ಇವರಿಗೆ ಹಸಿವಿನ ಬೆಲೆ ತಿಳಿದಿದ್ದು ಹಾಗಾಗಿ ಇಂದು ಸಾವಿರಾರು ಜನರಿಗೆ ಸಹಾಯ ಮಾಡುವ ಹಾಗೆ ಮಾಡಿತು.
ಇವರಿಗೆ ಹುಟ್ಟಿನಿಂದ 14ವರ್ಷಗಳ ಕಾಲ ಮಾತು ಬಾರದೆ ಮೂಕನೆಂದು ಎಲ್ಲರ ಮಾತಿಗೂ ಬಲಿಯಾದರು. ಕೊನೆಗೂ ಛಲ ಬಿಡದ ಇವರ ಪ್ರಯತ್ನ ಸಫಲವಾಯಿತು.
ತಂದೆ-ತಾಯಿ ಕೂಲಿ ಮಾಡಿ ಮಗನನ್ನು ಸಾಕುತ್ತಿದ್ದರು. ಶಾಲೆಗೆ ಹೋಗುವುದಕ್ಕೆ ಹಿಂದೆ ಸರಿಯುತ್ತಿದ್ದ ಇವರು “ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ” ದಿನದಂದು ಮಾತ್ರ ಶಾಲೆಯಲ್ಲಿ ಇರುತ್ತಿದ್ದರು. ಜೊತೆಗೆ ಗಣ್ಯ ವ್ಯಕ್ತಿಗಳು ಧ್ವಜಾರೋಹಣ ನೆರವೇರಿಸುವುದು ಕಂಡು ಅಂದೇ ತಾನು ಮುಂದೊಂದು ದಿನ ಆ ಸ್ಥಾನದಲ್ಲಿ ನಿಲ್ಲಬೇಕು ಎಂಬ ಕನಸು ಕಂಡರು.
ಕೆಲಸ ಯಾವುದೇ ಆಗಿರಲಿ ನಿಷ್ಠೆಯಿಂದ ದುಡಿಯುವುದು ನಮ್ಮ ಕರ್ತವ್ಯ ಎಂಬಂತೆ ಯಾವುದೇ ಕೆಲಸ ಸಿಕ್ಕಿದರು ಪ್ರಾಮಾಣಿಕತೆಯಿಂದ ಕೆಲಸ ಮಾಡುವೆ ಎಂದು ನಿರ್ಧರಿಸಿದ ಇವರು ಕ್ಷೌರಿಕ ವೃತ್ತಿಯನ್ನು ಸುಮಾರು 10ವರ್ಷಗಳ ಕಾಲ ಮಾಡಿ ತದನಂತರ ಅಂಗಡಿಯಲ್ಲಿ ದುಡಿಯುವುದು ಹೀಗೆ ಹತ್ತಾರು ಕೆಲಸಗಳನ್ನು ಮಾಡುತ್ತಾ ಬಂದರು. ಬಡತನದಿಂದದ್ದ ಇವರ ಕುಟುಂಬ ದಿನ ಕಳೆದಂತೆ ಚೇತರಿಸಿಕೊಳ್ಳುತ್ತಾ ಬಂದಿತು. ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದರು.
ಸದಾಶಿವರ ರವರ ಅಜ್ಜ ದಿವಂಗತ ಅಟ್ಟೂರು ವೆಂಕಟಸ್ವಾಮಿ ಅವರು ಕೂಡ ತಮ್ಮ ಜೀವಿತಾವಧಿಯಲ್ಲಿ ಸಮಾಜ ಸೇವೆ ಮಾಡುತ್ತಲೇ ಬಂದವರು. ಇವರು ಕೂಡ ಅವರ ಅಜ್ಜನಂತೆ ಸಮಾಜಸೇವೆಯ ತೊಡಗಿಸಿಕೊಂಡರು. ಇಂದು ಡಾ.ಎಂ.ವಿ ಸದಾಶಿವ ರವರ ಈ ಕಾರ್ಯ ಯುವಜನತೆಗೆ ಮಾದರಿ.
“ಸದಾಶಿವರ ಸಮಾಜಮುಖಿ ಕಾರ್ಯಗಳು”
ಯುವಜನತೆಗೆ ಮಾರ್ಗದರ್ಶನ, ಎಲ್ಲೂ ಸ್ಪಾನ್ಸರ್ ಇಲ್ಲದೆ ಅವರ ಸ್ವಂತ ದುಡ್ಡನಲ್ಲಿ ಬಡವರಿಗೆ ಆರ್ಥಿಕ ಸಹಾಯ, ವಿಕಲಚೇತನರಿಗೆ ಉಚಿತ ಬಸ್ ಪಾಸ್, ಹಸಿದವರಿಗೆ ಅನ್ನ, ಅಂಗನವಾಡಿ ಮಕ್ಕಳಿಗೆ ಬಟ್ಟೆ ಹಾಗೂ ಚೇರ್ಸ್ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಧನಸಹಾಯ, ಶಿಕ್ಷಣ, ಸಾಮೂಹಿಕ ವಿವಾಹಗಳಿಗೆ ಮಾಂಗಲ್ಯ-ಕಾಲುಂಗರ, ಆಹಾರ ಧಾನ್ಯಗಳು, ಉಚಿತ ನೋಟ್ ಬುಕ್ಸ್, ಉಚಿತ ದಿನಪತ್ರಿಕೆಗಳು, ನಿರ್ಗತಿಕರಿಗೆ ಉಚಿತ ಊಟ, ವಲಸೆ ಬಂದ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಅನೇಕ ಕುಟುಂಬಗಳಿಗೆ ರೇಷನ್ ಕಿಟ್ ಜೊತೆಗೆ ಧನ ಸಹಾಯ ಮುಖ್ಯವಾಗಿ ಆಶಾ ಕಾರ್ಯಕರ್ತರಿಗೆ ಚಿನ್ನದ ಮೂಗುತಿ, ರೇಷನ್ ಕಿಟ್, ಸೀರೆ ಅರಿಶಿನ ಕುಂಕುಮ ಸಮೇತ ಬಾಗಿನ ನೀಡಿದರು. ಸದಾಶಿವ ಅವರ ಕನಸಿನ ಕೂಸು ಹೆಣ್ಣು ಮಕ್ಕಳಿಗೆ ಶುಚಿ ಖುಷಿ ಕಾರ್ಯಕ್ರಮದ ಅಡಿಯಲ್ಲಿ ಆರೋಗ್ಯದ ಅರಿವು ಹಾಗೂ ಸ್ಯಾನಿಟರಿ ಪ್ಯಾಡ್ ವಿತರಣೆ ಒಂದು ವರ್ಷಕ್ಕೆ 50 ಮಕ್ಕಳಿಗೆ ಸ್ಕಾಲರ್ಶಿಪ್ ಹಾಗೂ ಹಾಗೂ ಆರೋಗ್ಯ ಪಿಡಿತ ಜನರಿಗೆ ಧನ ಸಹಾಯ ಶಾಲೆಯ ಮಕ್ಕಳಿಗೆ ಬ್ಯಾಗ್ ಇನ್ನು ಅನೇಕ ಸಹಾಯವನ್ನು ಕಳೆದ 15 ವರ್ಷಗಳಿಗೂ ಹೆಚ್ಚು ಕಾಲ ಸಮಾಜ ಸೇವೆ ಮಾಡುತ್ತಲೇ ಬಂದಿರುವ ಡಾ.ಎಂ.ವಿ ಸದಾಶಿವ ರವರ ಸೇವೆಯು ಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.
“ಸದಾಶಿವರಿಗೆ ಸಂದ ಪ್ರಶಸ್ತಿಗಳು”
ಸದಾಶಿವರ ಸೇವೆಯನ್ನು ಪರಿಗಣಿಸಿ ನ್ಯಾಶನಲ್ ವರ್ಚುವಲ್ ಫೀಸ್ ಆಫ್ ಎಜುಕೇಶನ್ ಯೂನಿವರ್ಸಿಟಿಯು ಗೌರವ ಡಾಕ್ಟರೇಟ್ ಪದವಿ,
ಚಿಕ್ಕಬಳ್ಳಾಪುರದಲ್ಲಿ ಶಿರಡಿ ಸಾಯಿ ಎಜುಕೇಶನ್ ಅಂಡ್ ರೂರಲ್ ಡೆವಲಪ್‍ಮೆಂಟ್ ಟ್ರಸ್ಟ್ ಸ್ಥಾಪಿಸಿ ತಮ್ಮ ಸಮಾಜಸೇವೆಯನ್ನು ಮತ್ತಷ್ಟು ಹೆಚ್ಚಿಸಿರುವುದು ಪ್ರಶಂಸನೀಯ ಕಾರ್ಯವಾಗಿದೆ. ಇವರ ಸೇವೆಯನ್ನು ಪರಿಗಣಿಸಿ ನಾಡಿನ ಸುಮಾರು ಇನ್ನೂರಕ್ಕು ಹೆಚ್ಚು ನಾನಾಕಡೆಗಳಲ್ಲಿ, ಸಂಘ-ಸಂಸ್ಥೆಗಳಿಂದ ಗೌರವ ಸನ್ಮಾನಗಳು. ಜಿಲ್ಲಾಡಳಿತ ವತಿಯಿಂದ ನಡೆದ ಕೃಷಿ ಮೇಳದಲ್ಲಿ ಪ್ರಶಸ್ತಿ, ಕುದ್ಮಲ್ ರಂಗರಾವ್ ರಾಜ್ಯ ಪ್ರಶಸ್ತಿ, ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಸೇವಾ ರತ್ನ ಪ್ರಶಸ್ತಿ, ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ವತಿಯಿಂದ ರಾಜ್ಯೋತ್ಸವ ರತ್ನ ಪ್ರಶಸ್ತಿ, ಕರ್ನಾಟಕ ರಾಷ್ಟ್ರೀಯ ರಾಜ್ಯ ಮಟ್ಟದ ಸೇವಾ ರತ್ನ ಪ್ರಶಸ್ತಿ, ಗೌರವ ಡಾಕ್ಟರೇಟ್ ಪದವಿ, ಸಮಾನತೆಯ ಶ್ರೇಷ್ಠ ಮಾನವ ರಾಷ್ಟ್ರೀಯ ಪ್ರಶಸ್ತಿ, ಕರುನಾಡ ವಿಭೂಷಣ ರಾಷ್ಟ್ರ ಪ್ರಶಸ್ತಿ , ಕಾಯಕ ರತ್ನ ರಾಜ್ಯ ಪ್ರಶಸ್ತಿ, ಕರುನಾಡ ಹಣತೆ ಸಾಧಕ ಶ್ರೀ ರಾಜ್ಯ ಪ್ರಶಸ್ತಿ, ಯುವಚೇತನ ಚನ್ನಬಸವಣ್ಣ ಪ್ರಶಸ್ತಿ, ಸಾಮಾಜಿಕ ರತ್ನ ಪ್ರಶಸ್ತಿ, ವಿಶ್ವ ಕನ್ನಡ ಶ್ರೇಷ್ಠ ಸೇವಾ ರತ್ನ ಪ್ರಶಸ್ತಿ,ಯಶವಂತ್ ರಾಜ್ಯ ಪ್ರಶಸ್ತಿ , ಕಲಾರತ್ನ ಪ್ರಶಸ್ತಿ17 ವರ್ಷದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಹೀಗೆ ತಮ್ಮ ಸಮಾಜಮುಖಿ ಕಾರ್ಯಗಳಿಂದ ಚರಿತ್ರೆ ಸ್ತೃಷ್ಟಿಸಿದ ಡಾ.ಎಂ.ವಿ ಸದಾಶಿವ ರಿಗೆ ಇನ್ನಷ್ಟು ಕಾರ್ಯಗಳನ್ನು ಮಾಡುವ ಶಕ್ತಿ ಭಗವಂತ ಕರುಣಿಸಲಿ ಎಂದು ಆಶಿಸೋಣ.
ಕಳೆದ 15ವರ್ಷಗಳಿಂದ ಸಮಾಜಸೇವೆ ಮಾಡುತ್ತಿದ್ದು, ಅದೇ ಜೀವನವಾಗಿದೆ. ಇದರಲ್ಲೇ ತೃಪ್ತಿಯಿದೆ. ಪ್ರಾಮಾಣಿಕವಾಗಿ ದುಡಿಯುತ್ತೇನೆ ಮತ್ತು ಸೇವೆ ಮಾಡುತ್ತೇನೆ. ನನ್ನಿಂದ ಒಬ್ಬರ ಜೀವನ ಉದ್ಧಾರವಾಗಲಿ, ಯುವಜನತೆ ಸದೃಢವಾಗಲಿ, ಬಲಿಷ್ಠ ದೇಶ ನಿರ್ಮಾಣವಾಗಲಿ ಎಂಬುದೇ ನಮ್ಮ ಆಶಯ.
- ಸದಾಶಿವ ಎಂ.ವಿ
ಸಮಾಜ ಸೇವಕರು
ಎಸ್.ಎಸ್.ಈ.ಆರ್.ಡಿ.ಟಿ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರು
ಚಿಕ್ಕಬಳ್ಳಾಪುರ.
ದೀಪ್ತಿ ಅಡ್ಡಂತ್ತಡ್ಕ
ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು