Wednesday, June 19, 2024

ISROದಿಂದ ‘ಇನ್ಸಾಟ್-3ಡಿಎಸ್ ಹವಾಮಾನ ಉಪಗ್ರಹ’ ಯಶಸ್ವಿ ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಫೆಬ್ರವರಿ 17 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್ಎಲ್‌ವಿ ಎಫ್‌ 14 ಉಡಾವಣಾ ವಾಹನದಲ್ಲಿ ಇನ್ಸಾಟ್ -3 ಡಿಎಸ್ ( INSAT-3DS ) ಹವಾಮಾನ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು.

ಈ ಉಪಗ್ರಹವು ಭೂಸ್ಥಾಯೀ ಕಕ್ಷೆಯಲ್ಲಿ ಇರಿಸಲಾಗುವ ಮೂರನೇ ತಲೆಮಾರಿನ ಹವಾಮಾನ ಉಪಗ್ರಹದ ಅನುಸರಣಾ ಕಾರ್ಯಾಚರಣೆಯಾಗಿದೆ. ಈ ಸ್ಯಾಟಲೈಟ್ ಗೆ naughgy boy ಎಂದು ನಾಮಕರಣ ಮಾಡಲಾಗಿದೆ.‌

ಇನ್ಸಾಟ್ -3ಡಿಎಸ್ ಸಂಗ್ರಹಿಸಿದ ದತ್ತಾಂಶವನ್ನು ಭಾರತ ಹವಾಮಾನ ಇಲಾಖೆ (ಐಎಂಡಿ), ಮಧ್ಯಮ ಶ್ರೇಣಿಯ ಹವಾಮಾನ ಮುನ್ಸೂಚನೆಯ ರಾಷ್ಟ್ರೀಯ ಕೇಂದ್ರ (ಎನ್ಸಿಎಂಆರ್ಡಬ್ಲ್ಯುಎಫ್), ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ (ಐಐಟಿಎಂ), ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ (ಎನ್‌ಐಒಟಿ), ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ (ಐಎನ್ಸಿಒಐಎಸ್) ಮತ್ತು ಇತರ ಅಂಗಸಂಸ್ಥೆಗಳು ಮತ್ತು ಸಂಸ್ಥೆಗಳು ಸೇರಿದಂತೆ ಭೂ ವಿಜ್ಞಾನ ಸಚಿವಾಲಯದ (ಎಂಒಇಎಸ್) ಅಡಿಯಲ್ಲಿ ಬರುವ ವಿವಿಧ ಇಲಾಖೆಗಳು ಬಳಸಿಕೊಳ್ಳಲಿವೆ. ಈ ಸಹಯೋಗವು ವಿವಿಧ ಕ್ಷೇತ್ರಗಳಲ್ಲಿ ಹವಾಮಾನ ಮುನ್ಸೂಚನೆ ಮತ್ತು ಹವಾಮಾನ ಸೇವೆಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

ಭೂಮೇಲ್ಮೈನಲ್ಲಿ ನಡೆಯುವ ಹವಮಾನ ವೈಪರೀತ್ಯಗಳಾದ ಮಳೆ, ಹಿಮ, ಸುನಾಮಿ, ಸುಂಟರಗಾಳಿ, ಬೆಂಕಿ, ಹೀಗೆ ವಿವಿಧ ಬಗೆಯ ಹವಾಮಾನದ ಬೆಳವಣಿಗೆಯನ್ನು ಕ್ಷಿಪ್ರವಾಗಿ ನೀಡಲಿದೆ.

Related Articles

Latest Articles