ಡೆಹ್ರಾಡೂನ್: 7 ನೇ ತರಗತಿಯಲ್ಲಿರುವ 12 ವರ್ಷದ ವಿದ್ಯಾರ್ಥಿಯು 3 ನೇ ತರಗತಿಯಲ್ಲಿರುವ 7 ವರ್ಷದ ಬಾಲಕನಿಗೆ ಅಸ್ವಾಭಾವಿಕವಾಗಿ ಲೈಂಗಿಕ ಕಿರುಕುಳ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಡೆಹ್ರಾಡೂನ್‌ನ ರಾಯ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದಾಗಿ ನ್ಯೂಸ್9 ಲೈವ್ ವೆಬ್‌ಸೈಟ್ ವರದಿ ಪ್ರಕಟಿಸಿದೆ.
ಈ ಘಟನೆ ಜೂನ್‌ನಲ್ಲಿ ಸಂಭವಿಸಿದೆ, ಆದರೆ ಸಂತ್ರಸ್ಥ ಬಾಲಕನ ತಂದೆ ಬುಧವಾರ ದೂರನ್ನು ಸಲ್ಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸ್ ಅಧಿಕಾರಿಯ ಪ್ರಕಾರ, ಸಂತ್ರಸ್ತ ಬಾಲಕ ಮತ್ತು ಆರೋಪಿ ಬಾಲಕ ಇಬ್ಬರೂ ಒಂದೇ ನೆರೆಹೊರೆಯಲ್ಲಿ ವಾಸಿಸುತ್ತಿದ್ದಾರೆ. ಆರೋಪಿಯು ಕಿರಿಯ ಹುಡುಗನ ಮನೆಗೆ ಒಬ್ಬಂಟಿಯಾಗಿರುವಾಗ ಪ್ರವೇಶಿಸಿ, ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ, ಅಸ್ವಭಾವಿಕವಾಗಿ ಲೈಂಗಿಕ ಕಿರು ನೀಡಿದ್ದಾಗಿ ವರದಿಯಾಗಿದೆ. ನಂತರ ಬಾಲಕನಿಗೆ ಈ ಬಗ್ಗೆ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿ ಆರೋಪಿ ಅಲ್ಲಿಂದ ತೆರಳಿದ್ದಾನೆ.
ಒಂದು ದಿನದ ನಂತರ ಎರಡೂ ಕುಟುಂಬಗಳಿಗೆ ಘಟನೆಯ ಬಗ್ಗೆ ತಿಳಿದಿದೆ. ಆದರೆ ಪೊಲೀಸರ ಮಧ್ಯಪ್ರವೇಶವನ್ನು ತಪ್ಪಿಸಲು, ಎರಡೂ ಕುಟುಂಬ ರಾಜಿಸಂಧಾನ ಮಾಡಿದೆ.
ಆರೋಪಿಯನ್ನು ಬೇರೆ ಊರಿನಲ್ಲಿರುವ ಸಂಬಂಧಿಕರೊಂದಿಗೆ ಇರಲು ಕಳುಹಿಸಲು ಬಾಲಕನ ಪೋಷಕರು ಆಗ್ರಹಿಸಿದ್ದಾರೆ. ಇದಕ್ಕೆ ಒಪ್ಪಿದ ಆರೋಪಿ ಬಾಲಕನ ಪೋಷಕರು ಆತನನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ದಾರೆ. ಆದಾಗ್ಯೂ, ಕೆಲವು ವಾರಗಳ ಹಿಂದೆ, ಆರೋಪಿಯು ಮನೆಗೆ ಮರಳಿದ್ದು, ಸಂತ್ರಸ್ತ ಬಾಲಕನ ಕುಟುಂಬದಿಂದ ಆಕ್ಷೇಪಣೆಗೆ ಕಾರಣವಾಯಿತು.
ಇದರಿಂದ ಮತ್ತೆ ಭಿನ್ನಾಭಿಪ್ರಾಯ ಮೂಡಿ ಪೊಲೀಸ್ ದೂರು ಕೊಟ್ಟಿದ್ದಾರೆ.