Saturday, January 25, 2025

ಸ್ಕೂಟರ್ ಒಳಗೆ ಅವಿತು ಕುಳಿತ ನಾಗರ ಹಾವು

ಮಂಗಳೂರು: ಸ್ಕೂಟರ್ ಒಳಗೆ ನಾಗರ ಹಾವಿನ ಮರಿಯೊಂದು ಅವಿತು ಕುಳಿತ್ತಿದ್ದ ಘಟನೆ ನಗರದ ಎಂ.ಜಿ. ರಸ್ತೆ ಬಳಿ ಬೆಳಕಿಗೆ ಬಂದಿದೆ.

ಸ್ಕೂಟರ್ ನಿಲ್ಲಿಸಿ ಅಂಗಡಿಗೆ ಹೋಗಿದ್ದ ವ್ಯಕ್ತಿ ಮರಳಿ ಬರುವಾಗ ನಾಗರ ಹಾವಿನ ಮರಿಯನ್ನು ಗಮನಿಸಿದ್ದಾರೆ. ಕೂಡಲೇ ವಿಚಾರವನ್ನು ಉರಗ ರಕ್ಷಕ ಸ್ನೇಕ್ ಗಂಗಯ್ಯ ಬೋಳಾರ್ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಗಂಗಯ್ಯ, ಸ್ಕೂಟರ್ ಒಳಗೆ ಅವಿತ್ತಿದ್ದ ನಾಗರ ಹಾವಿನ ಮರಿಯನ್ನು ರಕ್ಷಣೆ ಮಾಡಿದ್ದಾರೆ.

Related Articles

Latest Articles