Wednesday, June 19, 2024

ಸುಬ್ರಹ್ಮಣ್ಯ: ಒಣ ಅಡಿಕೆ ರಾಶಿ ಮಧ್ಯೆ ಯುವಕನ ಅರೆಬೆಂದ ಶವ ಪತ್ತೆ

ಸುಬ್ರಹ್ಮಣ್ಯ: ಕೊಟ್ಟಿಗೆಯಲ್ಲಿ ಇರಿಸಿದ್ದ ಒಣಗಿದ ಅಡಿಕೆ ರಾಶಿ ಮಧ್ಯೆ ಯುವಕನ ಅರೆಬೆಂದ ಶವ ಪತ್ತೆಯಾದ ಘಟನೆ‌ ಸುಳ್ಯ ತಾಲ್ಲೂಕಿನ ಗುತ್ತಿಗಾರು‌ ಗ್ರಾಮದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಇಲ್ಲಿನ ಆಚಳ್ಳಿ ನಿವಾಸಿ ಸಿರಿಯಾಕ್ ಮ್ಯಾಥ್ಯೂ ಎಂಬುವರ ಪುತ್ರ ಸೈಬಿನ್ (35) ಎಂದು ಗುರುತಿಸಲಾಗಿದೆ.

ಮೃತ ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದೆ.

ಶುಕ್ರವಾರ ಮಧ್ಯಾಹ್ನದ ವೇಳೆಗೆ ಘಟನೆ ಬೆಳಕಿಗೆ ಬಂದಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

Latest Articles