ಬಿಜೆಪಿ ಮುಖಂಡ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ತಲೆಮರೆಸಿ ಕೊಂಡಿರುವ ಮೂವರು ಆರೋಪಿಗಳ ಸುಳಿವು ನೀಡಿದವರಿಗೆ ತಲಾ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‌ಐಎ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ.
2022ರ ಜುಲೈ 26ರಂದು ಪ್ರವೀಣ್ ಹತ್ಯೆ ಯಾಗಿದ್ದು, ಆರೋಪಿ ನಂಬರ್ 23 ಆಗಿರುವ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ ನೌಷಾದ್ (32), ಸೋಮವಾರಪೇಟೆಯ ಕಲಕಂದೂರು ಅಬ್ದುಲ್ ರಹಿಮಾನ್ (36) ಮತ್ತು ಅಬ್ದುಲ್ ನಾಸಿರ್ (41) ತಲೆಮರೆಸಿ ಕೊಂಡಿರುವವರು.