ಏಕದಿನ ವಿಶ್ವಕಪ್ 2023: ಚೆನ್ನೈನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮಾತ್ರ ಭಾರಿ ರೋಚಕತೆಯನ್ನು ಹೊಂದಿತ್ತು, ಕೊನೆಯವರೆಗೂ ಗೆಲುವು ಯಾವ ಕಡೆಗೆ ಬೇಕಾದರೂ ಹೋಗುವ ಹಂತದಲ್ಲಿರುವಾಗ ದಕ್ಷಿಣ ಆಫ್ರಿಕಾ ಒಂದು ವಿಕೆಟ್‌ನಿಂದ ಗೆದ್ದು ಬೀಗಿದೆ.
ಕೇಶವ್ ಮಹಾರಾಜ್ ಕೇವಲ 7 ರನ್ ಗಳಿಸಿದರೂ ದಕ್ಷಿಣ ಆಫ್ರಿಕಾ ತಂಡಕ್ಕೆ ಹೀರೋ ಆದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ 21 ಎಸೆತಗಳನ್ನು ಎಚ್ಚರಿಕೆಯಿಂದ ಎದುರಿಸಿದ ಕೇಶವ್ ಮಹಾರಾಜ್, ನವಾಜ್ ಎಸೆತದಲ್ಲಿ ಬೌಂಡರಿ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು, ಮತ್ತೊಂದೆಡೆ ಶಂಸಿ ಕೂಡ ಎಚ್ಚರಿಕೆಯಿಂದ ಔಟ್ ಆಗದಂತೆ ಆಡಿ 4 ರನ್ ಗಳಿಸಿದರು.
ಕೇಶವ್ ಮಹರಾಜ್ ದಕ್ಷಿಣ ಆಫ್ರಿಕಾ ತಂಡಕ್ಕಾಗಿ ಆಡುತ್ತಿದ್ದರು ಅವರ ಮೂಲಕ ಭಾರತ, ಭಾರತಕ್ಕೆ ಭೇಟಿ ನೀಡಿದಾಗೆಲ್ಲಾ ಅವರು ಇಲ್ಲಿನ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವ ಮೂಲಕ ತಮ್ಮ ಭಕ್ತಿ ಪ್ರದರ್ಶನ ಮಾಡುತ್ತಾರೆ, ಇದೇ ಕಾರಣಕ್ಕೆ ಭಾರತೀಯರಿಗೆ ಅವರನ್ನು ಕಂಡರೆ ಒಂದು ವಿಶೇಷ ಭಾವನೆ ಕೂಡ ಇದೆ.
ಇನ್ನು ಕೇಶವ ಮಹರಾಜ್ ಆಂಜನೇಯನ ದೊಡ್ಡ ಭಕ್ತರಾಗಿದ್ದಾರೆ. ಪಾಕಿಸ್ತಾನದ ವಿರುದ್ಧ ಗೆದ್ದ ಬಳಿಕ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊ ಹಂಚಿಕೊಂಡಿದ್ದು, ದೇವರ ಮೇಲಿನ ನಂಬಿಕೆಯನ್ನು ಪ್ರದರ್ಶಿಸಿದ್ದಾರೆ.
“ನಾನು ನಂಬಿದ ದೇವರಿಂದ, ಹುಡುಗರಿಂದ ವಿಶೇಷ ಫಲಿತಾಂಶ ಬಂದಿದೆ. ತಬ್ರೈಜ್ ಶಂಸಿ ಮತ್ತು ಐಡೆನ್ ಮಾರ್ಕ್ರಾಂ ಅವರ ಆಟವನ್ನು ಅದ್ಭುತವಾಗಿತ್ತು. ಜೈ ಶ್ರೀ ಹನುಮಾನ್” ಎಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಕೇಶವ್ ಮಹಾರಾಜ್ ತಮ್ಮ ಟ್ವಿಟರ್ ಖಾತೆಯಲ್ಲಿ ಭಾರತದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಗೆಲುವಿನ ತುಣುಕನ್ನು ಹಂಚಿಕೊಂಡಿರುವ ಅವರು, ‘ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ ಭಾರತ, ಲವ್ಯೂ ಚೆನ್ನೈ’ ಎಂದು ಸಂದೇಶ ನೀಡಿದ್ದಾರೆ.