ಪ್ರವಾಸಕ್ಕೆಂದು ದಾಂಡೇಲಿಗೆ ಬಂದಿದ್ದ ಪ್ರವಾಸಿಗ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ನಿವಾಸಿ ಪವನ್‌ಕುಮಾರ್ ಮೃತಪಟ್ಟ ದುರ್ದೈವಿ.
ಪವನ್ ಕುಮಾರ್ ಏಳೆಂಟಯ ಜನರ ತಂಡದ ಜೊತೆ ಪ್ರವಾಸಕ್ಕೆಂದು ದಾಂಡೇಲಿಗೆ ಆಗಮಿಸಿದ್ದರು. ದಾಂಡೇಲಿಯ ಹೋಂ ಸ್ಟೇವೊಂದರಲ್ಲಿ ಇವರೆಲ್ಲರೂ ತಂಗಿದ್ದರು.
ಈ ವೇಳೆ ಪವನ್ ಅವರಿಗೆ ರಾತ್ರಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಆತನನ್ನು ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿದೆ. ಆದರೆ ಅದಾಗಲೇ ಆತ ಹೃದಯಘಾತದಿಂದ ಸಾವನ್ನಪ್ಪಿದ್ದಾನೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.