ಶಿರಸಿ: ಇಬ್ಬರು ಅಪ್ರಾಪ್ತ ಬಾಲಕಿಯರು ನಾಪತ್ತೆಯಾಗಿದ್ದು, ಪಾಲಕರ ಆತಂಕಕ್ಕೆ ಕಾರಣವಾಗಿದೆ. ಬಾಲ ಮಂದಿರಕ್ಕೆ ಹೋಗುವುದಾಗಿ ಹೇಳಿ ಹೋದವರನ್ನು ಯಾರೋ ಪುಸಲಾಯಿಸಿ ಅಪಹರಣ ಮಾಡಿಕೊಂಡ ಹೋಗಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗಣೇಶನಗರದ ಗೋಸಾವಿಗಲ್ಲಿಯ 7ನೇ ತರಗತಿ ವಿದ್ಯಾರ್ಥಿನಿ ಸಂಜನಾ ಯುವರಾಜ ಗೋಸಾವಿ (14), 3 ನೇ ತರಗತಿಯ ಅರ್ಚನಾ ದಶರಥ ಗೋಸಾವಿ (12) ನಾಪತ್ತೆಯಾದ ಅಪ್ರಾಪ್ತ ಬಾಲಕಿಯರು.
ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಗಣೇಶನಗರದ ಗೋಸಾವಿಗಲ್ಲಿಯಲ್ಲಿರುವ ಮನೆಯಿಂದ, ತಾವು ಕಲಿಯುತ್ತಿರುವ ಕಾರವಾರದ ಬಾಲ ಮಂದಿರಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದಾರೆ. ಆದರೆ, ವಾಪಾಸು ಆಗದೆ ಇದ್ದಾಗ, ಆತಂಕ ಹೆಚ್ಚಾಗಿದೆ. ಈ ಬಗ್ಗೆ ಪೋಷಕರು ಸ್ಥಳೀಯರು, ಸಂಬಂಧಿಕರ ಬಳಿ ವಿಚಾರಿಸಿದ್ದಾರೆ. ಆದರೆ ಬಾಲಕಿಯರು ಪತ್ತೆಯಾಗಿಲ್ಲ.
ಹೀಗಾಗಿ ಈ ಅಪ್ತಾಪ್ತ ಬಾಲಕಿಯರನ್ನು ಯಾರೋ ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿದ್ದಾರೆ ಎಂದು ಶಂಕಿಸಲಾಗಿದೆ. ಅಪಹರಣ ಮಾಡಿಕೊಂಡು ಹೋದ ಮಗಳು ಹಾಗೂ ಮೈದುನನ ಮಗಳನ್ನು ಪತ್ತೆ ಮಾಡಿ, ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶೋಭಾ ಯುವರಾಜ ಗೋಸಾವಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.