ದಕ್ಷಿಣ ಕನ್ನಡ: ಮನೆ ಪಕ್ಕದ ಕಾಡಿಗೆ ಬಿದ್ದಿದ್ದ ಬೆಂಕಿ ನಂದಿಸಲು ಹೋಗಿ ದಂಪತಿ ಸಾವನ್ನಪ್ಪಿದ್ದಾರೆ. ಬಂಟ್ವಾಳ ಅಮ್ಟಾಡಿ ಗ್ರಾಮದ ತುಂಡು ಪದವು ಎಂಬಲ್ಲಿ ಘಟನೆ ನಡೆದಿದ್ದು, ಗಿಲ್ಬರ್ಟ್ ಕಾರ್ಲೋ (78) ಮತ್ತವರ ಹೆಂಡತಿ ಕ್ರಿಸ್ಟಿನಾ ಕಾರ್ಲೋ (70) ಎಂಬುವರು ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಇವರು ತಮ್ಮ ಮನೆ ಪಕ್ಕದ ಕಸ ಕಡ್ಡಿಗೆ ಬೆಂಕಿ ಹಾಕಿದ್ದರು. ಕಸ ಕಡ್ಡಿಗೆ ಹಾಕಿದ್ದ ಬೆಂಕಿ ದಿಢೀರ್ ಕಾಡಿಗೆ ವ್ಯಾಪಿಸಿದೆ. ಈ ವೇಳೆ ಬೆಂಕಿ ನಂದಿಸಲು ಹೋಗಿದ್ದಾರೆ. ಕಾಡಿನಲ್ಲೇ ಬೆಂಕಿ ಸುಟ್ಟ ಹಿನ್ನಲೆ ಗಂಡ, ಹೆಂಡತಿ ಇಬ್ಬರು ಪ್ರಾಣಬಿಟ್ಟಿದ್ದಾರೆ.
ಸದ್ಯ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.