Monday, September 16, 2024

ಬಾಯ್‌ಫ್ರೆಂಡ್‌ನೊಂದಿಗೆ ಶವವಾಗಿ ಪತ್ತೆಯಾದ ನೀಲಿ ಚಿತ್ರ ತಾರೆ..!

ಅಮೆರಿಕದ ನೀಲಿ ಚಿತ್ರ ತಾರೆ ಜೆಸ್ಸಿ ಜೇನ್(43) ಮತ್ತು ಆಕೆಯ ಬಾಯ್‌ಫ್ರೆಂಡ್ ನಟ ಬ್ರೇಟ್ ಒಂದೇ ಮನೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಜ.‌24 ರಂದು ನಡೆದಿದೆ. ಬ್ರೇಟ್ ನ ಮನೆಯಲ್ಲಿ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಅಮೆರಿಕಾದ ಓಕ್ಲಾಹೋಮಾದಲ್ಲಿ (Moore, Oklahoma) ಘಟನೆ ನಡೆದಿದೆ.

ಮಿತಿ ಮೀರಿ ಮಾದಕ ವಸ್ತು ಸೇವನೆ ಮಾಡಿದ್ದಕ್ಕಾಗಿ, ಇವರಿಬ್ಬರ ಜೀವ ಹೋಗಿದೆ ಪೊಲೀಸ್ ಉನ್ನತ ಅಧಿಕಾರಿ ತಿಳಿಸಿದ್ದಾರೆ‌ ಎಂದು ಅಮೆರಿಕಾದ ಸುದ್ದಿ ಮಾಧ್ಯಮಗಳು ವರದಿ ಪ್ರಕಟಿಸಿದೆ.

ಜೆಸ್ಸಿ ಬ್ರೇಟ್ ಜೊತೆ ಲಿವ್ ಇನ್‌ ರಿಲೇಶಿನ್‌ಶಿಪ್‌ನಲ್ಲಿ ಇದ್ದಳು. ಹಾಗಾಗಿ ಈಕೆ ಬಾಯ್‌ಫ್ರೆಂಡ್ ಮನೆಯಲ್ಲಿಯೇ ಇರುತ್ತಿದ್ದಳು. ಇಬ್ಬರೂ ಅಗತ್ಯಕ್ಕಿಂತ ಹೆಚ್ಚು ಮಾದಕ ವಸ್ತುವನ್ನು ಸೇವಿಸಿದ್ದಕ್ಕೆ, ಇವರಿಬ್ಬರು ಸಾವನ್ನಪ್ಪಿದ್ದಾರೆ.

ಇಬ್ಬರ ಶವವೂ ಒಂದೇ ಜಾಗದಲ್ಲಿ ಸಿಕ್ಕ ಕಾರಣ, ಸ್ಥಳೀಯ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಜೆಸ್ಸಿ 2003ರಲ್ಲಿ ನೀಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಟಿವಿ ಕಾರ್ಯಕ್ರಮಗಳಲ್ಲೂ ಆಕೆ ಭಾಗವಹಿಸಿದ್ದರು.

Related Articles

Latest Articles