Wednesday, June 19, 2024

ಕಾರು—ಬೈಕ್‌ ನಡುವೆ ಭೀಕರ ಅಪಘಾತ: ಓರ್ವ ಸಾವು, ಮತ್ತೋರ್ವ ಗಂಭೀರ

ತುಮಕೂರು: ಕಾರು ಮತ್ತು ಬೈಕ್‌ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್‌ ಸವಾ ಸಾವನ್ನಪ್ಪಿದ ಘಟನೆ ತಿಪಟೂರು ತಾಲೂಕಿನ ತಿಮ್ಲಾಪುರ ಗ್ರಾಮದ ಬಳಿ ನಡೆದಿದೆ.

ಹೋನ್ನವಳ್ಳಿ ಹೋಗುತ್ತಿರುವ ಮಾರ್ಗಮಧ್ಯೆ ಈ ಘಟನೆ ನಡೆದಿದೆ. ಹೊನ್ನವಳ್ಳಿ ಮೂಲೆ ಮನೆ ನಿವಾಸಿ ಸೋಮಶೇಖರ (42) ಮೃತಪಟ್ಟ ವ್ಯಕ್ತಿ.. ಅಪಘಾತದ ತೀವ್ರತೆಗೆ ಬೈಕ್‌ ಸವಾರನ ಕಾಲು ತುಂಡಾಗಿ ಕಾರಿನ ಮುಂಭಾಗದಲ್ಲೇ ಸಿಲುಕಿಕೊಂಡಿರುವ ದೃಶ್ಯ ಭೀಕರವಾಗಿದ್ದು, ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

ಅಪಘಾತದಲ್ಲಿ ಉಮೇಶ್‌ ಎಂಬವರಿಗೆ ಗಂಭೀರವಾಗಿ ಗಾಯವಾಗಿದ್ದು, ಅವರ ಕಾಲು ಮುರಿತಕ್ಕೊಳಗಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಮಶೇಖರ ಅವರು ತನ್ನ ಜಮೀನಿನಲ್ಲಿ ಬೆಳೆದ ಅವರೇಕಾಯಿಯನ್ನು ಕೊಯ್ಡ್ತು ತಿಪಟೂರಿನ ಬೀದಿ ಬದಿಯಲ್ಲಿ ಮಾರಾಟ ಮಾಡಿ ಊರಿಗೆ ವಾಪಸ್‌ ಆಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಘಟನೆ ಸಂಬಂಧ ಹೊನವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Latest Articles