Monday, September 16, 2024

ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನೇ ಕೊಂದ ಗಂಡ; ತಬ್ಬಲಿಯಾದ ಆರು ತಿಂಗಳ ಮಗು

ಬೆಂಗಳೂರು: ಪತಿಯೊಬ್ಬ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕೊಲೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸುವ ನಾಟಕ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರೇಖಾ ಮೃತ ದುರ್ದೈವಿಯಾಗಿದ್ದು, ಸಂತೋಷ್ ಬಂಧಿತ ಆರೋಪಿ.

ಇವರಿಬ್ಬರು ಮೂಲತಃ ತಮಿಳುನಾಡಿನವರಾಗಿದ್ದು ಬೆಂಗಳೂರಿನ ಯಲಹಂಕದಲ್ಲಿ ನೆಲಸಿದ್ದರು. ವೆಲ್ಡಿಂಗ್ ಕೆಲಸದಲ್ಲಿದ್ದ ಸಂತೋಷ್ ಹಾಗೂ ರೇಖಾ ಒಬ್ಬರನ್ನು ಒಬ್ಬರು ಪ್ರೀತಿಸುತ್ತಿದ್ದರು. ಕಳೆದ ಒಂದೂವರೆ ವರ್ಷದ ಹಿಂದೆ ಇಬ್ಬರು ಮನೆಯವರನ್ನು ಒಪ್ಪಿಸಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಈ ಇಬ್ಬರಿಗೆ 6 ತಿಂಗಳ ಮಗು ಇದೆ.

ಆದರೆ ಸಂತೋಷ್ ಮದುವೆ ನಂತರ ತನ್ನ ಅಸಲಿ ರೂಪ ತೋರಿಸಿದ್ದ. ರೇಖಾಳ ಬಳಿ ಸೈಟ್ ಖರೀದಿಸಬೇಕು, ತವರು ಮನೆಯಿಂದ ಹಣ ತೆಗೆದುಕೊಂಡು ಬರುವಂತೆ ಕಿರುಕುಳ ನೀಡುತ್ತಿದ್ದ. ಈ ವಿಷಯದ ಬಗ್ಗೆ ರೇಖಾ ಹಾಗೂ ಸಂತೋಷ್ ಮಧ್ಯೆ ಆಗಾಗ ಜಗಳ ನಡೆಯುತ್ತಿದ್ದು, ಸಂತೋಷ್ ರೇಖಾಳನ್ನು ಥಳಿಸುತ್ತಿದ್ದ.

ಇದೇ ವಿಚಾರವಾಗಿ ಸಂತೋಷ್ ರೇಖಾಳನ್ನು ಕೊಲೆ ಮಾಡಿ, ಬಳಿಕ ಆಕೆಯ ಕುತ್ತಿಗೆಗೆ ಸೀರೆ ಕಟ್ಟಿ ಫ್ಯಾನಿಗೆ ನೇತು ಹಾಕಿದ್ದಾನೆ. ಅದಾದ ಬಳಿಕ ರೇಖಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಬಿಂಬಿಸಲು ಯತ್ನಿಸಿದ್ದ. ಘಟನೆಗೆ ಸಂಬAಧಿಸಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಂತೋಷ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Related Articles

Latest Articles