ಕಾಸರಗೋಡು: ಯುವತಿಯೋರ್ವಳು ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಂದ್ಯೋಡು ಸಮೀಪದ ಆಡ್ಕ ಎಂಬಲ್ಲಿ ಡಿ. 31 ರಂದು ನಡೆದಿದೆ. ಅಡ್ಕದ ಫ್ಲ್ಯಾಟ್ ನಲ್ಲಿ ವಾಸವಾಗಿರುವ ಬದ್ರುದ್ದೀನ್ ರವರ ಪುತ್ರಿ ರೆನಾ ಫಾತಿಮಾ (19) ಮೃತ ಪಟ್ಟ ಯುವತಿ.
ಡಿ. 30ರ ಶನಿವಾರ ರಾತ್ರಿ ಮಲಗಿದ್ದ ಈಕೆ ಮರುದಿನ ಬೆಳಿಗ್ಗೆ ಮನೆಯವರು ಎದ್ದಾಗ ನಾಪತ್ತೆ ಯಾಗಿದ್ದಳು. ಗಾಬರಿ ಗೊಂಡ ಮನೆಯವರು ಶೋಧ ನಡೆಸಿದದಾಗ ಇನ್ನೊಂದು ಕೋಣೆಯ ಬಾಗಿಲು ಒಳಗಿನಿಂದ ಚಿಲಕ ಜಡಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇನ್ನು ನೆರೆಹೊರೆಯವರ ಹಾಗೂ ಮನೆಯವರು ಬಾಗಿಲು ಮುರಿದು ನೋಡಿದಾಗ ರೆನಾ ಫಾತಿಮಾಳು ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಯುವತಿಗೆ ಯುವಕನೋರ್ವ ಕಿರುಕುಳ ನೀಡುತ್ತಿದ್ದುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಈ ಹಿನ್ನಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರೆನಾ ಫಾತಿಮಾಳ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.