ಮಂಗಳೂರು: ಕೊಡಿಯಾಲ್ ಗುತ್ತಿನ ಫ್ಲ್ಯಾಟ್‌ವೊಂದರ ಕೋಣೆಯೊಳಗೆ ಬಾಕಿಯಾದ ಮಗುವನ್ನು ಪಾಂಡೇಶ್ವರ ಅಗ್ನಿಶಾಮಕ ಠಾಣೆಯವರು ರಕ್ಷಣೆ ಮಾಡಿದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ.
ನಾಲ್ಕನೇ ಮಹಡಿಯ ಫ್ಲ್ಯಾಟ್‌ನ ಕೋಣೆಯೊಳಗೆ ಇದ್ದ ಸುಮಾರು 3 ವರ್ಷದ ಮಗು ಆಟವಾಡುತ್ತಾ ಬಾಗಿಲಿನ ಚಿಲಕವನ್ನು ಹಾಕಿ ತೆಗೆಯಲು ಸಾಧ್ಯವಾಗಲಿಲ್ಲ. ಮಗು ಕೋಣೆಯೊಳಗೆ ಬಾಕಿಯಾಗಿ ಮನೆಯವರು ಗಾಬರಿಯಾಗಿದ್ದರು. ಬಳಿಕ ಪಾಂಡೇಶ್ವರ ಠಾಣೆಯ ಅಗ್ನಿಶಾಮಕ ಅಧಿಕಾರಿ ರಾಜಾ ಮತ್ತು ಸಿಬಂದಿ ಕಾರ್ಯಾಚರಣೆ ನಡೆಸಿದರು.
ಹಗ್ಗದ ಸಹಾಯದಿಂದ 4ನೇ ಮಹಡಿಯ ಮೇಲಿನಿಂದ ಮಗುವಿದ್ದ ಕೋಣೆಯ ಒಳಗೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ.