ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ, ಬಾಹುಬಲಿ ಖ್ಯಾತಿಯ ಪ್ರಭಾಸ್, ಶೃತಿ ಹಾಸನ್, ಪೃಥ್ವಿರಾಜ್ ನಟನೆಯ ಸಲಾರ್’ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.
ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ‘ಸಲಾರ್’ ಸಿನಿಮಾ ಮೂರು ದಿನಕ್ಕೆ 200 ಕೋಟಿ ರೂಪಾಯಿ ಗಳಿಸಿದೆ. ವಿಶ್ವದಾದ್ಯಂತ ಈ ಚಿತ್ರ 400 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಇದರೊಂದಿಗೆ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ ಸೈಯದ್ ಫರ್ಜಾನಾ ಪಾತ್ರ ಗಮನ ಸೆಳೆದಿದೆ.
‘ಸಲಾರ್’ ಸಿನಿಮಾದಲ್ಲಿ ಕಾಟೇರಮ್ಮ ದೇವಿಯ ಎದುರು ಫೈಟ್ ಸೀಕ್ವೆನ್ಸ್ ಎಲ್ಲರಿಗೂ ಇಷ್ಟವಾಗಲಿದೆ. ಈ ದೃಶ್ಯದಲ್ಲಿ ಸುರಭಿ ಎಂಬ ಹುಡುಗಿಗಾಗಿ ಕಥಾ ನಾಯಕ ಹೋರಾಡುತ್ತಾನೆ. ಆ ಫೈಟ್ ಸಿನಿಮಾದ ಹೈಲೈಟ್ ಆಯಿತು. ಸುರಭಿ ಪಾತ್ರದಲ್ಲಿ ನಟಿಸಿರುವ ಬಾಲಕಿ ಫರ್ಜಾನಾ ಸೈಯದ್.
ಇತ್ತೀಚೆಗೆ ಅವರು ತೆಲುಗು ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಝಾನ್ಸಿ ವೆಬ್ ಸರಣಿಯಲ್ಲಿ ಫರ್ಜಾನಾ ಕಾಣಿಸಿಕೊಂಡಿದ್ದರು. ಐಪಿಎಲ್ ಜಾಹೀರಾತಿನಲ್ಲಿ ಅವರು ನಟಿಸಿದ್ದರು. ಕೆಲವು ಶಾಲಾ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ‘ಸಲಾರ್’ ಚಿತ್ರದಲ್ಲಿ ಕಾಟೇರಮ್ಮ ಎದುರು ನಡೆಯುವ ಹೊಡೆದಾಟದ ದೃಶ್ಯದಲ್ಲಿ ಸೈಯದ್ ಹೈಲೈಟ್ ಆಗಿದ್ದರು. ಅವರಿಗೆ ಬೇಡಿಕೆ ಹೆಚ್ಚಿದೆ. ಬಾಲ ಕಲಾವಿದೆಯಾಗಿ ಅವರು ಗಮನ ಸೆಳೆದಿದ್ದಾರೆ.