Tuesday, June 25, 2024

ಹೊಸ ಸಿನಿಮಾ ಘೋಷಿಸಿದ ಅಕ್ಷಯ್ ಕುಮಾರ್; ‘ವೆಲ್​ಕಮ್ ​3’ ಚಿತ್ರದಲ್ಲಿದೆ ಸ್ಟಾರ್ ದಿಗ್ಗಜರು – ಯಾರೆಲ್ಲಾ ಇದ್ದಾರೆ ಗೊತ್ತಾ?

ಸ್ಟಾರ್ ನಟ ಅಕ್ಷಯ್ ಕುಮಾರ್ ಸಾಲು ಸಾಲು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಿಲಾಡಿಯ ಸಿನಿಮಾ ಅಂದರೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದ್ದೇ ಇರುತ್ತದೆ. ಈಗ ಅವರ ಬರ್ತ್​ಡೇ ದಿನ (ಸೆಪ್ಟೆಂಬರ್ 9) ‘ವೆಲ್​ಕಮ್ 3’ ಸಿನಿಮಾ ಘೋಷಣೆ ಮಾಡಿದ್ದಾರೆ.

ಈ ಚಿತ್ರದಲ್ಲಿ ಸ್ಟಾರ್ಸ್ ದಂಡಿದೆ. ಈ ಚಿತ್ರಕ್ಕೆ ‘ವೆಲ್​ಕಮ್ ಟು ದಿ ಜಂಗಲ್’ ಎಂದು ಶೀರ್ಷಿಕೆ ಇಡಲಾಗಿದೆ. ಟೈಟಲ್ ಟೀಸರ್ ರಿಲೀಸ್ ಆಗಿದ್ದು ಗಮನ ಸೆಳೆದಿದೆ.

‘ವೆಲ್​ಕಮ್’ ಹಾಗೂ ‘ವೆಲ್​ಕಮ್ 2’ ಸಿನಿಮಾ ಯಶಸ್ಸಿನ ಬಳಿಕ ‘ವೆಲ್​ಕಮ್ 3’ ಸಿನಿಮಾ ತೆರೆಗೆ ತರಲು ಸಿದ್ಧತೆ ನಡೆದಿದೆ. ಈ ಚಿತ್ರದ ಪಾತ್ರವರ್ಗ ಹಿರಿದಾಗಿದೆ. ಅಕ್ಷಯ್ ಕುಮಾರ್, ಸಂಜಯ್ ದತ್, ಅರ್ಷದ್ ವಾರ್ಸಿ, ದಿಶಾ ಪಟಾಣಿ, ರವೀನಾ ಟಂಡನ್, ಲಾರಾ ದತ್ತ, ಪರೇಶ್ ರಾವಲ್ ಸೇರಿ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ.

ಈ ಸಿನಿಮಾ ಕ್ರಿಸ್​ಮಸ್ ಪ್ರಯುಕ್ತ 2024ರ ಡಿಸೆಂಬರ್ 20ರಂದು ರಿಲೀಸ್ ಆಗಲಿದೆ.

‘ವೆಲ್​ಕಮ್ 3’ ಸಿನಿಮಾಗೆ ಅಹ್ಮದ್ ಖಾನ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಪಾತ್ರವರ್ಗ ಎಲ್ಲರ ಗಮನ ಸೆಳೆಯುತ್ತಿದೆ. ಜಿಯೋ ಸ್ಟುಡಿಯೋ ಹಾಗೂ ಬೇಸ್ ಇಂಡಸ್ಟ್ರೀಸ್ ಗ್ರೂಪ್ ‘ವೆಲ್​ಕಮ್ 3’ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದೆ. ಜ್ಯೋತಿ ದೇಶಪಾಂಡೆ, ಫಿರೋಜ್ ನಾಡಿಯಾದ್ವಾಲಾ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಪ್ರೀ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

Related Articles

Latest Articles