ತಾಯಿಯೊಬ್ಬಳು ತನ್ನ ಮಗನನ್ನು ಟೆರೇಸ್ ನಿಂದ ಎಸೆದು, ಮೇಲಿಂದ ಬಿದ್ದ ಎಂದು ಕಥೆ ಕಟ್ಟಿ, ನಾಲ್ಕು ತಿಂಗಳ ನಂತರ ತನ್ನ ಅಪರಾಧ ಒಪ್ಪಿಕೊಂಡಿರುವ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.
ಪೊಲೀಸ್ ಪೇದೆ ಧ್ಯಾನ್ ಸಿಂಗ್ ಎಂಬ ವ್ಯಕ್ತಿ ತಮ್ಮ ಪ್ಲಾಸ್ಟಿಕ್ ಅಂಗಡಿಯ ಉದ್ಘಾಟನೆ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಆದರೆ, ಅವರ ಪತ್ನಿ ಜ್ಯೋತಿ, ಪಕ್ಕದ ಮನೆಯ ಉದಯ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಕಾರ್ಯಕ್ರಮದ ಸಂದರ್ಭದಲ್ಲಿ ಜ್ಯೋತಿ ಹಾಗೂ ಉದಯ್ ಟೆರೇಸ್ ನಲ್ಲಿ ಏಕಾಂತದಲ್ಲಿ ಇರಲು ಯತ್ನಿಸಿದ್ದಾರೆ. ಈ ವೇಳೆ ಅಲ್ಲಿಗೆ ಮಗು ಜತಿನ್ ಕೂಡ ಬಂದಿದ್ದಾನೆ.
ಅಲ್ಲಿ ತನ್ನ ತಾಯಿ ಮತ್ತು ಉದಯ್ ಹತ್ತಿರವಾಗುವುದನ್ನು ನೋಡಿದ್ದಾನೆ. ಜ್ಯೋತಿ ತನ್ನ ಮಗನನ್ನು ಕಂಡಾಗ ಭಯಗೊಂಡು ಮಗುವನ್ನು ಟೆರೇಸ್ ಮೇಲಿಂದ ಎಸೆದಿದ್ದಾಳೆ ಎನ್ನಲಾಗಿದೆ.
ಎರಡು ಮಹಡಿಯಿಂದ ಬಿದ್ದಿದ್ದರಿಂದ ಮಗುವಿನ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಮಗುವನ್ನು ಜಯರೋಗ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆದರೆ, ಎಲ್ಲರೂ ಮಗುವೇ ಟೆರೇಸ್ ಮೇಲಿಂದ ಬಿದ್ದಿದೆ ಎಂದೇ ನಂಬಿದ್ದರು. ಕೆಲವು ದಿನಗಳ ನಂತರ ಮಹಿಳೆಗೆ ತಾನು ಮಾಡಿದ ತಪ್ಪು ಅರಿವಾಗಿ, ಪತಿಗೆ ಎಲ್ಲ ವಿಷಯ ಹೇಳಿದ್ದಾಳೆ. ನಂತರ ಪತಿ ದೂರು ಸಲ್ಲಿಸಿದ್ದಾರೆ. ಸದ್ಯ ಆರೋಪಿ ಜ್ಯೋತಿ ಹಾಗೂ ಪ್ರಿಯಕರ ಉದಯ್ ನನ್ನು ಬಂಧಿಸಿರುವ ಪೊಲೀಸರು, ತನಿಖೆ ನಡೆಸಿದ್ದಾರೆ.