Sunday, October 13, 2024

ವಿದೇಶಕ್ಕೆ‌ ತೆರಳಲು ಹಣ ಕೊಡದ‌ ಮಾವನ ಖಾಸಗಿ ಅಂಗ ಕತ್ತರಿಸಿ ಕೊಲೆಮಾಡಿದ ಸೊಸೆ

ಸೊಸೆಯೊಬ್ಬಳು ವಿದೇಶಕ್ಕೆ ತೆರಳಲು 2 ಲಕ್ಷ ರೂ. ನೀಡಲು ನಿರಾಕರಿಸಿದ ಮಾವನ ಖಾಸಗಿ ಅಂಗವನ್ನೇ ಕತ್ತರಿಸಿ ಕೊಲೆಗೈದ ಘಟನೆ ಗುಜರಾತ್ ನ ಖೇಡಾದಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿ ಜಗದೀಶ್ ಶರ್ಮಾ (75) ಎಂದು ಗುರುತಿಸಲಾಗಿದ್ದು, ಆರೋಪಿ ಸೊಸೆಯನ್ನು ಪೊಲೀಸರು ಬಂಧಿಸಿದ್ದಾರೆ.

ತನ್ನ ಜೊತೆ ದೈಹಿಕ ಸಂಬಂಧ ಬೆಳೆಸಿದ್ದ ಮಾವ ವಿದೇಶಕ್ಕೆ ಹೋಗಲು ಹಣ ಕೊಡಲು ನಿರಾಕರಿಸಿದ್ದ. ಆದ್ದರಿಂದ ಆತನ ಖಾಸಗಿ ಅಂಗವನ್ನೇ ಕತ್ತರಿಸಿ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಸೊಸೆ ಬಹಿರಂಗಪಡಿಸಿದ್ದಾಳೆ.

ಫೇಸ್‌ಬುಕ್‌ನಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದು, ವಿದೇಶಕ್ಕೆ ತೆರಳಲು ಬಯಸಿದ್ದೆ. ಇದಕ್ಕಾಗಿ ಮಾವನ ಬಳಿ ಹಣ ಕೇಳಿದ್ದೆ. ಆದರೆ ಹಣ ಕೊಡಲು ನಿರಾಕರಿಸಿದ್ದ ಎಂದು ಆಕೆ ಹೇಳಿದ್ದಾಳೆ.

ಸುಮಾರು ಮೂರು ದಿನಗಳಿಂದ ಜಗದೀಶ್ ಶರ್ಮಾ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆತನ ಹಿರಿಯ ಮಗ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಬಳಿಕ ಆತ ಪೊಲೀಸರಿಗೆ ಮಾಹಿತಿ ನೀಡಿದ್ದ. ಇದಾದ ಮೇಲೆ ಮೃತದೇಹವನ್ನು ಪರೀಕ್ಷಿಸಿದ ವೇಳೆ ಖಾಸಗಿ ಅಂಗ ಕತ್ತರಿಸಿರುವುದು ಹಾಗೂ ತಲೆಗೆ ಬಲವಾಗಿ ಹೊಡೆದಿರುವುದು ಪತ್ತೆಯಾಗಿತ್ತು.

Related Articles

Latest Articles