Wednesday, November 6, 2024

ತಾಯಿಯೊಂದಿಗೆ ಶ್ರೀ ಕೃಷ್ಣ ಮಂತ್ರ ಪಠಿಸಿದ 8 ತಿಂಗಳ ಮಗು; ಇಲ್ಲಿದೆ ವಿಡಿಯೊ!

ತಾಯಿಯೊಂದಿಗೆ ಎಂಟು ತಿಂಗಳ ಮಗುವೊಂದು ಶ್ರೀ ಕೃಷ್ಣ ದಾಮೋದರಾಷ್ಟಕಂ ಪಠಣ ಮಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ. ಸಾಕಷ್ಟು ವೈರಲ್ ಆಗಿರುವ ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅರ್ಜುನನ ಪುತ್ರ ಅಭಿಮನ್ಯು ತಾಯಿಯ ಗರ್ಭದಲ್ಲಿರುವಾಗಲೇ ಚಕ್ರವ್ಯೂಹವನ್ನು ಭೇದಿಸುವ ಕಲೆಯನ್ನು ತಂದೆಯಿಂದ ಕಲಿತಿರುತ್ತಾನೆ. ಅಂತೆಯೇ ಈ ಮಗು ತಾಯಿಯಿಂದ ಶ್ರೀ ಕೃಷ್ಣ ದಾಮೋದರಾಷ್ಟಕಂ ಅನ್ನು ಕಲಿತಿದೆ ಎನ್ನುವ ಸಾಲುಗಳೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಹಳೆಯ ವೈರಲ್ ವಿಡಿಯೋ ಇದಾಗಿದ್ದು, ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ವೈದಿಕ್ ಗ್ಯಾನ್ ಎಂಬ ಪುಟದಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ತಾಯಿ ಪಕ್ಕದಲ್ಲಿ ಮಲಗಿರುವ ಮಗು ತಾಯಿಯೊಂದಿಗೆ ಶ್ರೀ ಕೃಷ್ಣ ದಾಮೋದರಾಷ್ಟಕಂ ಅನ್ನು ಪಠಿಸುತ್ತಿದೆ.

ಶ್ರೀ ಕೃಷ್ಣ ದಾಮೋದರಾಷ್ಟಕಂನ ಕೊನೆಯ ಪದ್ಯವನ್ನು ಮಗು ಪೂರ್ಣಗೊಳಿಸವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಶ್ರೀ ಕೃಷ್ಣ ದಾಮೋದರಾಷ್ಟಕಂನ ಪ್ರತಿ ಸಾಲಿನ ಕೊನೆಯ ಪದವನ್ನು ಮಗುವು ಮುದ್ದಾಗಿ ಅಷ್ಟೇ ಸಲೀಸಾಗಿ ಉಚ್ಚರಿಸಿರುವುದನ್ನು ಕೇಳಬಹುದು.

Related Articles

Latest Articles