Monday, December 9, 2024

ಇಂದು ಆರನೇ ಹಂತದ ಮತದಾನ – 889 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಲೋಕಸಭೆ ಚುನಾವಣೆಯು ಅಂತಿಮ ಹಂತ ತಲುಪಿದೆ. ಇಂದು 58 ಕ್ಷೇತ್ರಗಳಲ್ಲಿ 6ನೇ ಹಂತದ ಮತದಾನ ಶುರುವಾಗಿದೆ. ಸುಷ್ಮಾ ಸ್ವರಾಜ್‌ ಪುತ್ರಿ ಬಾನ್ಸುರಿ ಸ್ವರಾಜ್‌, ಮನೋಹರ ಲಾಲ್‌ ಖಟ್ಟರ್‌, ಕನ್ಹಯ್ಯ ಕುಮಾರ್‌ ಸೇರಿ ಹಲವು ಪ್ರಮುಖ ನಾಯಕರ ಭವಿಷ್ಯವು ಇಂದು ಮತಯಂತ್ರಗಳಲ್ಲಿ ಭದ್ರವಾಗಲಿದೆ. ಆ ಮೂಲಕ ಮತದಾನ ಪ್ರಭುಗಳು ಇಂದೇ ತಮ್ಮ ನೆಚ್ಚಿನ ನಾಯಕನ ಸಿಂಹಾಸನ ಭದ್ರಗೊಳಿಸಲು ವೋಟಿಂಗ್ ಮಾಡಲಿದ್ದಾರೆ.

8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬಿಹಾರದ 8 ಸ್ಥಾನಗಳು, ಹರಿಯಾಣದ ಎಲ್ಲ 10 ಸ್ಥಾನ, ಜಾರ್ಖಂಡ್‌ 4, ಜಮ್ಮು-ಕಾಶ್ಮೀರದ 1, ದೆಹಲಿಯ ಎಲ್ಲ 7 ಸ್ಥಾನ, ಒಡಿಶಾದ 6, ಉತ್ತರ ಪ್ರದೇಶದ 14 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಒಟ್ಟು 889 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿ ಇದ್ದಾರೆ. 7ರಿಂದ ಮತದಾನ ಆರಂಭವಾಗಿದ್ದು, ಜನರು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ನವದೆಹಲಿಯಿಂದ ಬಾನ್ಸುರಿ ಸ್ವರಾಜ್, ಸುಲ್ತಾನ್‌ಪುರ ದಿಂದ ಮೇನಕಾ ಗಾಂಧಿ, ಹರಿಯಾಣದ ಕುರುಕ್ಷೇತ್ರದಿಂದ ನವೀನ್ ಜಿಂದಾಲ್, ತಮ್ಲುಕ್ ಕ್ಷೇತ್ರದಿಂದ ಅಭಿಜಿತ್ ಗಂಗೋಪಾಧ್ಯಾಯ, ಸಂತ ಕಬೀರ ನಗರದಿಂದ ಪ್ರವೀಣ್ ನಿಶಾದ್, ಈಶಾನ್ಯ ದೆಹಲಿ ಕ್ಷೇತ್ರದಿಂದ ಮನೋಜ್ ತಿವಾರಿ VS ಮತ್ತು ಕನ್ಹಯ್ಯಾ ಕುಮಾರ್, ಪುರಿ ಕ್ಷೇತ್ರದಿಂದ ಸಂಬಿತ್ ಪಾತ್ರ, ನೀರಜ್ ತ್ರಿಪಾಠಿ, ಅನಂತ್ ನಾಗ್ ಸೇರಿದಂತೆ ಹಲವ ಭವಿಷ್ಯ ನಿರ್ಧಾರವಾಗಲಿದೆ.

Related Articles

Latest Articles