Tuesday, July 23, 2024

ಮೀಮ್ಸ್‌ಗೆ ಖ್ಯಾತಿ ಹೊಂದಿದ್ದ ಕಬೋಸು ಶ್ವಾನ ಇನ್ನಿಲ್ಲ – ಕೋಟ್ಯಾಂತರ ಅಭಿಮಾನಿಗಳ ಮುದ್ದಿನ ನಾಯಿಯ ವಿದಾಯಕ್ಕೆ ಅಂತಿಮ ಸಿದ್ಧತೆ!

ಡಾಗ್ ಮೀಮ್‌ಗೆ ತುಂಬಾ ಹೆಸರುವಾಸಿಯಾಗಿದ್ದ ಕಬೋಸು ನಾಯಿ ಇನ್ನಿಲ್ಲ. 19 ವರ್ಷದ ಕಬೋಸ್‌ ನಾಯಿ ಮೇ.೨೪ರಂದು ಜಪಾನ್‌ನಲ್ಲಿ ಸಾವನ್ನಪ್ಪಿದೆ. ಕಬೋಸು ಅದೆಷ್ಟು ಜನರಿಗೆ ಸ್ಫೂರ್ತಿಯಾಗಿತ್ತು ಅಂದ್ರೆ ಇದರಿಂದಲೇ ಬಹಳಷ್ಟು ಮೀಮ್‌ ಪ್ರಸಿದ್ಧಿಯಾಗಿತ್ತು. ಕಬೋಸು ಮೀಮ್‌ಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು.

ಕಬೋಸು ಮಾಲೀಕರಾದ ಅಟ್ಸುಕೊ ಸಾಟೊ ಅವರು ಮೇಮ್ ಡಾಗ್ ಸಾವನ್ನಪ್ಪಿದ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಕಬೋಸು ಸಾವಿನ ಸುದ್ದಿ ತಿಳಿದ ಬಹಳಷ್ಟು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಂಬನಿ ಮಿಡಿಯುತ್ತಿದ್ದಾರೆ.

ಶಿಬಾ ಇನು ತಳಿಯ ಕಬೋಸ್‌ ಅನ್ನು ಅಟ್ಸುಕೊ ಸಾಟೋ ಅವರು 2008ರಿಂದ ಪಾಲನೆ ಮಾಡಿಕೊಂಡು ಬಂದಿದ್ದಾರೆ. ಹಲವು ವರ್ಷಗಳಿಂದ ತನ್ನ ಜೊತೆಗಿದ್ದ ಕಬೋಸ್ ಇಂದು ಬೆಳಗ್ಗೆ 7.50ರ ಸಮಯಕ್ಕೆ ಚಿರನಿದ್ರೆಗೆ ಜಾರಿದೆ. ಈ ಬಗ್ಗೆ ವಿರೇಟ್‌ಡಾಗ್ಸ್‌ ಖಾತೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಕಬೋಸ್ ಸಾವನ್ನಪ್ಪಿದ ಸುದ್ದಿ ಸಾಕಷ್ಟು ವೈರಲ್ ಆಗಿದ್ದು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಕಬೋಸ್‌ಗೆ ಅಂತಿಮ ವಿದಾಯ ಹೇಳಲು ಮೇ 26ರಂದು ದಿನಾಂಕ ನಿಗದಿ ಮಾಡಲಾಗಿದೆ. ಅಂದು ಜಪಾನ್‌ನ ನರಿತಾ ಸಿಟಿಯಲ್ಲಿ ಫೇರ್‌ವೆಲ್ ಪಾರ್ಟಿ ಮಾಡಲು ಭರದ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

Related Articles

Latest Articles