Friday, June 27, 2025

ವಿಶ್ವದ ಅತ್ಯಂತ ದುಬಾರಿ ಬೆಲೆಯ ಮಾವು.. ಒಂದು ಹಣ್ಣಿನ ಬೆಲೆ ಬರೋಬ್ಬರಿ 10 ಸಾವಿರ ರೂಪಾಯಿ

ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಪ್ರದರ್ಶನ ಧಾರವಾಡದಲ್ಲಿ ನಡೆಯುತ್ತಿದೆ. ಧಾರವಾಡ ತೋಟಗಾರಿಕೆ ಇಲಾಖೆಯ ಮಾವು ಮೇಳದಲ್ಲಿ ಪ್ರದರ್ಶನದಲ್ಲಿ ಜಪಾನಿನ ಮಿಯಾ ಜಾಕಿ ಎಂಬ ಒಂದು ಮಾವು ಕೂಡ ಇದೆ. ಈ ಜಾತಿಯ ಮಾವಿನ ಹಣ್ಣಿನ ವಿಶೇಷತೆ ಏನು ಗೊತ್ತಾ?

ಈ ಒಂದು ಮಿಯಾ ಜಾಕಿ ಮಾವಿನ ಹಣ್ಣಿಗೆ 10 ಸಾವಿರ ರೂಪಾಯಿ ಬೆಲೆ ಆಗಿದೆ. ಕೆಜಿಗೆ ಕೇಜಿಗೆ 2.7 ಲಕ್ಷ ರೂಪಾಯಿ ಬೆಲೆಯಾಗಿದೆ. ಧಾರವಾಡ ಕಲಕೇರಿ ಗ್ರಾಮದಲ್ಲಿ ಪ್ರಮೋದ ಗಾಂವಕರ್ ಎಂಬ ರೈತ ಮಿಯಾ ಜಾಕಿ ಹಣ್ಣನ್ನು ಬೆಳೆದಿದ್ದಾರೆ.

ಕಳೆದ ನಾಲ್ಕು ವರ್ಷದಿಂದ ಕೇವಲ 4 ರಿಂದ 5 ಮಾವು ಬಿಡುತಿದ್ದ ಮಿಯಾ ಜಾಕಿ ಮರ, ಈ ವರ್ಷ ಬಂಪರ್ ಬೆಳೆ ನೀಡಿದೆ. 25 ಮಿಯಾ ಜಾಕಿ ಮಾವು ಬಿಟ್ಟಿದೆ. ಆ ಮೂಲಕ ಒಂದೇ ಮಾವಿನ ಮರದಿಂದ ಮಾಲೀಕ ಭರ್ಜರಿ ಲಾಭ ಮಾಡಿದ್ದಾರೆ. ಸದ್ಯ ಧಾರವಾಡ ಮಾವು ಮೇಳದಲ್ಲಿ ಇದರ ಬಗ್ಗೆ ಚರ್ಚೆ ಆಗುತ್ತಿದೆ.

ಮಾವಿನ ಹಣ್ಣನ್ನು ಕೊಪ್ಪಳದ ಗ್ರಾಹಕರೊಬ್ಬರಿಗೆ ಪ್ರತಿ ಹಣ್ಣಿಗೆ 10 ಸಾವಿರ ರೂಪಾಯಿಯಂತೆ ಮಾರಾಟ ಮಾಡಿದ್ದೇನೆ. ರಾಜ್ಯದಲ್ಲಿ ಕೆಲವೇ ಖರೀದಿದಾರರು ಲಭ್ಯವಿದ್ದಾರೆ. ಇದು ಪೌಷ್ಠಿಕಾಂಶದಿಂದ ಸಮೃದ್ಧವಾಗಿದೆ. ವಿಟಮಿನ್ ಎ, ಬಿ ಮತ್ತು ಸಿ ಹೊಂದಿದೆ. ಹಣ್ಣಿನ ಸೇವನೆ ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಇತರ ಬೆಳೆಗಾರರಿಗೆ ಅರಿವು ಮೂಡಿಸುವುದಕ್ಕಾಗಿ ಇಲ್ಲಿ ಒಂದು ಹಣ್ಣನ್ನು ಪ್ರದರ್ಶಿಸಿದ್ದೇನಷ್ಟೆ ಎಂದು ಪ್ರಮೋದ ಗಾಂವಕರ್ ತಿಳಿಸಿದ್ದಾರೆ.

Related Articles

Latest Articles