ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈ ವಿಕಿಪಿಡಿಯಾವೂ ಪೇಜ್ ಓಪನ್ ಮಾಡಿದ್ದು ಸಾಕಷ್ಟು ಚರ್ಚೆಯಾಗುತ್ತಿದೆ. 2024ರ ಜೂನ್ ತಿಂಗಳಲ್ಲಿ ಅತಿ ಹೆಚ್ಚು ಚರ್ಚೆ ಆದ ಟಾಪಿಕ್ ಹಿನ್ನಲೆ ವಿಕಿಪೀಡಿಯಾ ಪುಟ ತೆರೆದಿದೆ. ಗೂಗಲ್ ನಲ್ಲಿ ರೇಣುಕಾಸ್ವಾಮಿ ಕೊಲೆ ಎಂದು ಸರ್ಚ್ ಮಾಡಿದ್ರೆ ವಿಕಿಪೀಡಿಯಾ ಪುಟವೇ ಮೊದಲು ಕಾಣಿಸಿಕೊಳ್ಳಲಿದೆ.
ಜೂನ್ 8ರಂದು ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ಬೆಳಕಿಗೆ ಬಂತು. ಅಂದಿನಿಂದ ಇಂದಿನ ತನಕ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ಈ ಕೇಸ್ ಮುಂದುವರಿಯುತ್ತಿದೆ. ಬೆಂಗಳೂರು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕೊಲೆ ಆರೋಪದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಅನೇಕರನ್ನು ಬಂಧಿಸಿದ್ದಾರೆ. ಈ ಎಲ್ಲ ಘಟನೆಗಳಿಗೆ ಸಂಬಂಧಪಟ್ಟಂತೆ ಈಗ ವಿಕಿಪೀಡಿಯಾ ಪುಟ ಓಪನ್ ಆಗಿದೆ.
ಪ್ರತಿ ದಿನ ನೂರಾರು ಕೊಲೆ ಪ್ರಕರಣಗಳು ವರದಿ ಆಗುತ್ತವೆ. ಆ ಎಲ್ಲ ಕೇಸ್ಗಳಿಗೆ ವಿಕಿಪೀಡಿಯಾ ಪುಟ ಇರುವುದಿಲ್ಲ. ಆದರೆ ರೇಣುಕಾ ಸ್ವಾಮಿ ಕೊಲೆಯಲ್ಲಿ ಹೈಪ್ರೊಫೈಲ್ ವ್ಯಕ್ತಿಗಳ ಹೆಸರು ಕೇಳಿಬಂದಿರುವ ಕಾರಣದಿಂದ ಇದು ಹೆಚ್ಚು ಸುದ್ದಿ ಆಗಿದೆ. ಹೀಗಾಗಿ ‘Murder of Renukaswamy’ ವಿಕಿಪೀಡಿಯಾ ಪೇಜ್ನಲ್ಲಿ ಮಾಹಿತಿ ನೀಡಲಾಗಿದೆ.

ರೇಣುಕಾ ಸ್ವಾಮಿ ಕೊಲೆ ನಡೆದ ದಿನಾಂಕ, ಮೃತದೇಹ ಪತ್ತೆ ಆದ ಸ್ಥಳ, ಆತನ ಪತ್ನಿಯ ಹೆಸರು, ಮದುವೆ ಆದ ವರ್ಷ, ತಂದೆ-ತಾಯಿ ಹೆಸರು, ಕೊಲೆಗೆ ಕಾರಣ ಸೇರಿದಂತೆ ಅನೇಕ ವಿವರಗಳನ್ನು ಕಲೆಹಾಕಿ ಈ ವಿಕಿಪೀಡಿಯಾ ಪುಟ ತೆರೆಯಲಾಗಿದೆ. ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳಿಸಿದ ನಂತರ ಏನೆಲ್ಲ ಆಯಿತು? ಕೊಲೆಗೂ ಮೊದಲು ನಡೆದ ಘಟನೆಗಳು ಏನು? ರೇಣುಕಾ ಸ್ವಾಮಿಯ ಮರಣೋತ್ತರ ಪರೀಕ್ಷೆಯಲ್ಲಿ ಇರುವ ವಿವರಗಳೇನು ಎಂಬುದನ್ನು ಈ ಪುಟದಲ್ಲಿ ಬರೆಯಲಾಗಿದೆ.