ವಿನೇಶ್ ಫೋಗಟ್ ಒಲಂಪಿಕ್ಸ್ನ ಕುಸ್ತಿಯಾಟದಲ್ಲಿ ಗೆದ್ದಿದ್ದ ಗಟ್ಟಿಗಿತ್ತಿ. ಸೋಲೇ ಕಾಣದವಳನ್ನ ಸೋಲಿಸಿದ್ದ ಚಿನ್ನದ ಹುಡುಗಿ. ಆದ್ರೆ, ಕೇವಲ ನೂರು ಗ್ರಾಂ ತೂಕ ಹೆಚ್ಚಾಗಿದ್ದಕ್ಕೆ ಕುಸ್ತಿ ಅಂಗಳದಿಂದ ಹೊರಬಿದ್ದ ನತದೃಷ್ಟೇ. ಮತ್ತೆ ಕುಸ್ತಿ ಅಂಗಳಕ್ಕೆ ಕಾಲಿಡಲ್ಲ ಅಂದಿದ್ದ ವಿನೇಶ್ ಇದೀಗ ಭವಿಷ್ಯದಲ್ಲಿ ಕುಸ್ತಿ ಅಂಗಳದಲ್ಲಿ ಮತ್ತೆ ತೊಡೆ ತಟ್ಟಿ ನಿಲ್ಲುವ ಸುಳಿವು ಕೊಟ್ಟಿದ್ದಾರೆ.
ಒಲಿಂಪಿಕ್ ನಲ್ಲಿ ಅನರ್ಹಗೊಂಡ ಬೇಸರದಲ್ಲೇ ವಿನೇಶ್ ಫೋಗಟ್ ಕುಸ್ತಿಗೆ ಗುಡ್ ಬಾಯ್ ಹೇಳಿದ್ರು. ಅಮ್ಮ.. ನಾನು ಕುಸ್ತಿ ನನ್ನ ವಿರುದ್ಧ ಗೆದ್ದಿದೆ. ನಾನು ಸೋತಿದ್ದೇನೆ, ಅಂತ ಭಾವನಾತ್ಮಕವಾಗಿ ಪೋಸ್ಟ್ ಮಾಡಿ ನಿವೃತ್ತಿ ಘೋಷಿಸಿ ಬಿಟ್ರು. ಬಳಿಕ ಬೆಳ್ಳಿ ಪದಕವಾದ್ರೂ ಸಿಗಲಿ ಅಂತಾ ಸಿಎಎಸ್ ಕೋರ್ಟ್ನಲ್ಲಿ ಅರ್ಜಿ ಕೂಡ ಸಲ್ಲಿಸಿದ್ರು. ದುರದೃಷ್ಟವಶಾತ್, ಆ ಪ್ರಯತ್ನ ಕೂಡ ವಿನೇಶ್ ಕೈ ಹಿಡಿಯಲಿಲ್ಲ. ಆದರೂ ಪದಕದಾಸೆ ಇನ್ನೂ ಜೀವಂತ ಅನ್ನುವ ಮಾತುಗಳೂ ಕ್ರೀಡಾ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ.
ನಾನು ಪುಟ್ಟ ಹುಡುಗಿ. ಪುಟ್ಟ ಹಳ್ಳಿಯಿಂದ ಬಂದವಳು. ಒಲಂಪಿಕ್ಸ್ ರಿಂಗ್ಗಳ ಬಗ್ಗೆಯೂ ಜ್ಞಾನವಿರದ ಸಾಮಾನ್ಯ ಹುಡುಗಿಯಾಗದ್ದೆ. ನನ್ನ ತಂದೆ ಓರ್ವ ಬಸ್ ಡ್ರೈವರ್ ಆಗಿದ್ದವರು. ನಾನು ತಂದೆಯ ಫೇವರೇಟ್ ಮಗಳು. ಯಾಕಂದ್ರೆ ನಾನೇ ಚಿಕ್ಕಮಗಳು. ನಾನು ಆಕಾಶದಲ್ಲಿ ವಿಮಾನದಲ್ಲಿ ಹಾರಬೇಕು ಅನ್ನೋ ಆಸೆ ಅಪ್ಪಂದು. ಆದ್ರೆ, ಒಂದಿನ ಅಪ್ಪ ನಮ್ಮನ್ನ ಬಿಟ್ಟು ಹೋಗ್ಬಿಟ್ರು. ನನ್ನ ತಾಯಿ ಕಷ್ಟದಿಂದ ನಮ್ಮನ್ನ ಬೆಳೆಸಿದ್ದಾರೆ. ಬಹುಶಃ ವಿಭಿನ್ನ ಸಂದರ್ಭಗಳಲ್ಲಿ, ನಾನು 2032 ರವರೆಗೆ ಆಡುವುದನ್ನು ನಾನು ನೋಡಬಹುದು. ಏಕೆಂದರೆ ನನ್ನಲ್ಲಿನ ಹೋರಾಟ ಮತ್ತು ನನ್ನಲ್ಲಿನ ಕುಸ್ತಿ ಯಾವಾಗಲೂ ಜೀವಂತ. ನನಗೆ ಭವಿಷ್ಯ ಏನಾಗುತ್ತದೆ ಮತ್ತು ಮುಂದಿನ ಈ ಪ್ರಯಾಣದಲ್ಲಿ ನನಗೆ ಏನು ಕಾಯುತ್ತಿದೆ ಎಂದು ನಾನು ಊಹಿಸಲು ಸಾಧ್ಯವಿಲ್ಲ. ಆದರೆ ನಾನು ನಂಬಿದ್ದಕ್ಕಾಗಿ ಮತ್ತು ಸರಿಯಾದ ವಿಷಯಕ್ಕಾಗಿ ನಾನು ಯಾವಾಗಲೂ ಹೋರಾಡುವುದನ್ನು ಮುಂದುವರಿಸುತ್ತೇನೆ ಎಂದು ನನಗೆ ಖಾತ್ರಿಯಿದೆ. ಎಂದಿದ್ದಾರೆ.
ಭವಿಷ್ಯ ಏನೋ ಗೊತ್ತಿಲ್ಲ ಅಂತಿರೋ ಫೋಗಟ್ 2032ರ ತನಕವೂ ಹೋರಾಡ್ತೀನಿ ಎಂದಿದ್ದಾರೆ. ಈಗಾಗಲೇ ನಿವೃತ್ತಿ ಘೋಷಿಸಿರೋ ಫೋಗಟ್ ಹೇಗೆ ಕಮ್ಬ್ಯಾಕ್ ಮಾಡ್ತಾರೆ ಅನ್ನೋ ಕುತೂಹಲ ಮೂಡಿದೆ. ಒಲಂಪಿಕ್ಸ್ ಆಟ ಮುಗಿಸಿ ದೇಶಕ್ಕೆ ವಾಪಾಸ್ ಆದ ಆಟಗಾರರನ್ನ ಪ್ರಧಾನಿ ಮೋದಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಕ್ರೀಡಾಪಟುಗಳ ಜೊತೆ ಕೆಲಕಾಲ ಸಂವಾದ ನಡೆಸಿದ್ರು. ಈ ವೇಳೆ ವಿನೇಶ್ ಫೋಗಟ್ ಫೈನಲ್ ತಲುಪಿದ್ದು ನಮ್ಮೆಲ್ಲರ ಹೆಮ್ಮೆಯ ಕ್ಷಣ ಎಂದು ಅಭಿನಂದನೆ ತಿಳಿಸಿದ್ದು ವಿಶೇಷವಾಗಿತ್ತು. ಕುಸ್ತಿಯಲ್ಲಿ ಕಾದಾಡಿದ್ರೂ ಪದಕ ದಕ್ಕಲಿಲ್ಲ ಅನ್ನೋದು ಬೇಸರವೇ.
ಇನ್ನು ವಿಶ್ವದಲ್ಲಿಯೇ ಒಂದು ವಾರಗಳ ಕಾಲ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಿದ್ದು ವಿನೇಶ್ ಫೋಗಟ್ ಹೆಸರು. ಇದರಲ್ಲಿಯೇ ಚಿನ್ನದ ಹುಡುಗಿಯ ತಾಖತ್ತು ಏನೆಂಬುವುದು ತಿಳಿಯುತ್ತದೆ.
ಪದಕ ವಂಚಿತರಾಗದ ವಿನೇಶ್ ಫೋಗಟ್ ಅವರಿಗೆ ಅಭಿನಂದನೆಗಳ ಸುರಿಮಳೆಯೆ ಹರಿದು ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನವಾಗಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಪೋಸ್ಟ್ ಒಂದರಲ್ಲಿ, ಒಲಿಂಪಿಕ್ ನಲ್ಲಿ ಚಿನ್ನ, ಬೆಳ್ಳಿ, ಕಂಚು ಪದಕ ಮಾತ್ರ. ವಿನೇಶ್ ಫೋಗಟ್ ಗೆ ವಜ್ರದ ಪದಕ ಕೊಟ್ಟು ಸಂಭ್ರಮಿಸಿದ್ದಾರೆ. ಈ ಪೋಸ್ಟ್‌ಗೆ ಕೋಟ್ಯಾಂತರ ಮಂದಿ ಮೆಚ್ಚುಗೆ ಕೊಟ್ಟಿದ್ದಾರೆ.