ಬೆಳ್ತಂಗಡಿ: ಕೊಯ್ಯರು ಬೆಳಾಲು ರಸ್ತೆಯಲ್ಲಿ ಪಿಕಪ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ.
ಬೆಳಾಲು ಗ್ರಾಮದ ನಿವಾಸಿ ಉಮೇಶ್ ಗೌಡ ರವರ ಪುತ್ರ, ಗುರುವಾಯನಕೆರೆ ಖಾಸಾಗಿ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ಜೀವ ಎಂದಿನಂತೆ ಮನೆಯಿಂದ ಬೈಕ್ ನಲ್ಲಿ ಗೆಳೆಯನ ಮನೆಯವರೆಗೆ ಬರುತ್ತಿರುವಾಗ ಮಲೆಬೆಟ್ಟು ನಿನ್ನಿಕಲ್ಲು ಎಂಬಲ್ಲಿ ಪಿಕಪ್ ಮತ್ತು ಬೈಕ್ ನಡುವೆ ಅಪಘಾತ ಆ. 11ರಂದು ಸಂಭವಿಸಿತ್ತು.
ಅಪಘಾತದಲ್ಲಿ ಬೈಕ್ ಸವಾರ ಜೀವ ಅವರಿಗೆ ಗಂಭೀರ ಗಾಯಗೊಂಡಿದ್ದು ಕೂಡಲೇ ಚಿಕಿತ್ಸೆಗೆ ಮಂಗಳೂರಿನ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ. 17ರಂದು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.