ಆರ್‌ಸಿಬಿ ಆಟಗಾರ ಟಾಮ್ ಕರ್ರಾನ್ನನ್ನು ನಾಲ್ಕು ಬಿಗ್ ಬ್ಯಾಷ್ ಲೀಗ್ ಪಂದ್ಯಗಳಿಗೆ ನಿಷೇಧಿಸಲಾಗಿದೆ. ಅಂಪೈರ್‌ಗೆ ಬೆದರಿಕೆ ಹಾಕಿದ ಆರೋಪದಡಿಯಲ್ಲಿ ಟಾಮ್ ಕುರ್ರಾನ್‌ಗೆ ನಿಷೇಧ ಹೇರಲಾಗಿದೆ.
2024ರ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟಾಮ್ ಕರ್ರಾನ್ನನ್ನು ಕೊಂಡುಕೊಂಡ ಆಟಗಾರ ಸದ್ಯ ನಾಲ್ಕು ಪಂದ್ಯಗಳಿಗೆ ಆಟವಾಡದಂತೆ ಬ್ಯಾನ್ ಮಾಡಿದ್ದಾರೆ.
ಸಿಡ್ನಿ ಸಿಕ್ಸರ್ಸ್ ಆಟಗಾರ ಹೋಬಾರ್ಟ್ ಹರಿಕೇನ್ಸ್ ವಿರುದ್ಧದ ಸಿಕ್ಸರ್ಸ್ ಪಂದ್ಯದ ಮೊದಲು, ಪೂರ್ವ ಅಭ್ಯಾಸ ಪಂದ್ಯದ ವೇಳೆ ಆನ್-ಫೀಲ್ಡ್ ಅಂಪೈರ್‌ನೊಂದಿಗೆ ಟಾಮ್ ಕರ್ರಾನ್ ವಾಗ್ವಾದಕ್ಕಿಳಿದಿದ್ರು.
ಹೀಗಾಗಿ ಅಂಪೈರ್‌ಗೆ ಬೆದರಿಕೆ ಹಾಕಿದ ಆರೋಪದಡಿಯಲ್ಲಿ ನಿಷೇಧ ಹೇರಲಾಗಿದೆ. ಕುರ್ರಾನ್ ಮೇಲೆ 3ನೇ ಹಂತದ ಅಪರಾಧದ ಆರೋಪ ಹೊರಿಸಲಾಗಿದೆ.
ಡಿಸೆಂಬರ್ 11 ರಂದು ಈ ಘಟನೆ ಬೆಳಕಿಗೆ ಬಂದಿದೆ. ಟಾಮ್ ಕರ್ರಾನ್ ಬಿಬಿಎಲ್ ಪಂದ್ಯಕ್ಕಾಗಿ ಲಾನ್ಸೆಸ್ಟನ್ನಲ್ಲಿ ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಅಂಪೈರ್ ಮಾತು ಕೇಳದೆ ಪಿಚ್ನಲ್ಲಿ ಬೌಲಿಂಗ್ ಪ್ರಾಕ್ಟೀಸ್ ಮಾಡಿದ್ದಾರೆ. ಅಂಪೈರ್ ಪಿಚ್ನಲ್ಲಿ ಓಡಾಡಬೇಡಾ ಅಂದರು ಟಾಮ್ ಕರ್ರಾನ್ ಮತ್ತೆ ಅದೇ ತಪ್ಪು ಮಾಡಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.