ಪ್ರಿ ವೆಡ್ಡಿಂಗ್ ಫೋಟೋಶೂಟ್ ಇತ್ತೀಚಿನ ಮದುವೆಗಳಲ್ಲಿ ರೂಢಿಯಾಗಿದೆ. ಚಿತ್ರ ವಿಚಿತ್ರವಾಗಿ, ವಿಭಿನ್ನ ವಿಶೇಷ, ಸೃಜನಶೀಲತೆಯ ಪರಿಕಲ್ಪನೆಗಳೊಂದಿಗೆ ನವಜೋಡಿ ಪ್ರೀವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ.
ಇತ್ತೀಚಿಗೆ ಇಂಟರ್ನೆಟ್ ನಲ್ಲಿ ವೈರಲ್ ಆಗಿರುವ ಪ್ರೀ ವೆಡ್ಡಿಂಗ್ ಫೋಟೋಶೂಟ್ ವೇಳೆ ನವಜೋಡಿ ಭಯಾನಕ ಕ್ಷಣವನ್ನ ಕಂಡಿದ್ದಾರೆ.
ರಾತ್ರಿ ಹೊತ್ತಲ್ಲಿ ಆಳವಿಲ್ಲದ ಕೊಳದಲ್ಲಿ ಕುಳಿತಿರುವ ಜೋಡಿ ಫೋಟೋಗೆ ಪೋಸ್ ನೀಡುತ್ತಿರುತ್ತಾರೆ. ವಿಡಿಯೋಗ್ರಾಫರ್, ಫೋಟೋಗ್ರಾಫರ್ ಸೇರಿದಂತೆ ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ತೊಡಗಿರುವಾಗ ಅನಿರೀಕ್ಷಿತವಾಗಿ ಹಾವೊಂದು ಕೊಳದಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ನೋಡಿದ ಕ್ಯಾಮೆರಾಮ್ಯಾನ್ ಗಾಬರಿಯಾಗುತ್ತಾರೆ. ವಧು ಸಹ ಕಿರುಚಲು ಮುಂದಾಗುತ್ತಾಳೆ. ಈ ವೇಳೆ ವರ ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸುತ್ತಾನೆ. ಬಳಿಕ ಹಾವು ಸ್ಥಳದಿಂದ ಹೊರಟುಹೋಗುತ್ತದೆ.
“ವಿವಾಹಪೂರ್ವದ ಚಿತ್ರೀಕರಣದ ನಡುವಿನ ಭಯಾನಕ ಮತ್ತು ತಮಾಷೆಯ ಕ್ಷಣಗಳು” ಎಂದು ಘಟನೆಯ ಕ್ಲಿಪ್ ಅನ್ನು ಫೋಟೋಗ್ರಾಫರ್ ಹಂಚಿಕೊಂಡಿದ್ದಾರೆ.