ತ್ರಿಶೂರ್: ಕೊರಟ್ಟಿಯಿಂದ ನಾಪತ್ತೆಯಾಗಿದ್ದ ದಂಪತಿ ವೆಲಂಕಣಿ ಚರ್ಚ್ ಬಳಿಯ ಲಾಡ್ಜ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ತಿರುಮುಡಿಕುನ್ನು ನಿವಾಸಿ ಆಂಟೊ (34) ಮತ್ತು ಅವರ ಪತ್ನಿ ಜಿಸು (29) ಎಂದು ಗುರುತಿಸಲಾಗಿದೆ. ಇಬ್ಬರೂ ವಿಷ ಸೇವಿಸಿದ್ದರು.
ಜೂ. 22ರಂದು ದಂಪತಿ ನಾಪತ್ತೆಯಾಗಿದ್ದರು. ದಂಪತಿ ವೇಲಂಕಣಿ ತಲುಪಿ ಇಲ್ಲಿನ ಸಂಘಟನೆಯೊಂದಕ್ಕೆ ಸೇರಿಕೊಂಡಿದ್ದಾರೆ ಎಂಬ ಮಾಹಿತಿ ಸಂಬಂಧಿಕರಿಗೆ ಸಿಕ್ಕಿತ್ತು. ಜು.೨ರ ಸಂಜೆ ವಿಷದ ಚುಚ್ಚುಮದ್ದು ಸೇವಿಸಿ ಅಸ್ವಸ್ಥರಾಗಿದ್ದ ಆಂಟೊ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದಾಗಲೇ ಅವರು ಮೃತಪಟ್ಟಿದ್ದಾರೆ.
ಆರ್ಥಿಕ ಸಂಕಷ್ಟ, ಸಾಲಬಾಧೆ ಆತ್ಮಹತ್ಯೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಶವವನ್ನು ಪೊಲೀಸರು ಕೊಂಡೊಯ್ದ ನಂತರ ನಾಗಪಟ್ಟಣಂ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.