Thursday, November 14, 2024

ಸ್ವಸಹಾಯ ಸಂಘವೊಂದರ ಸೇವಾ ಪ್ರತಿನಿಧಿ ನಾಪತ್ತೆ – ಪತ್ತೆಗಾಗಿ ಮನವಿ

ತೀರ್ಥಹಳ್ಳಿ : 24 ವರ್ಷದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ವರದಿಯಾಗಿದೆ. ಜೂನ್ 30ರಂದು ಮನೆಯಿಂದ ಸ್ವ ಸಹಾಯ ಸಂಘದ ಸೇವಾ ಪ್ರತಿನಿಧಿ ಕೆಲಸಕ್ಕೆಂದು ಹೊರಗೆ ಹೋದ ಪೂಜಾ ಎ.ಕೆ ಈವರೆಗೂ ವಾಪಾಸ್ಸಾಗಿಲ್ಲ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪೂಜಾ ಎ ಕೆ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಶಾಲ್ ಎಂಬುವವರ ಮಗಳಾಗಿದ್ದಾಳೆ.

ಈಕೆಯ ಚಹರೆ: 4.06 ಅಡಿ ಎತ್ತರ, ತೆಳುವಾದ ಮೈಕಟ್ಟು, ಕೋಲು ಮುಖ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೊರಗೆ ಹೋಗುವಾಗ ನೀಲಿ ಬಣ್ಣದ ಚೂಡಿ ಟಾಪ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಈಕೆಯ ಕುರಿತು ಮಾಹಿತಿ ದೊರೆತಲ್ಲಿ ಎಸ್.ಪಿ. ಕಚೇರಿ ಶಿವಮೊಗ್ಗ-08182-261400, ತೀರ್ಥಹಳ್ಳಿ ಡಿಎಸ್‌ಪಿ 08181-220388, ಸಿಪಿಐ ಮಾಳೂರು -9480803333 ಹಾಗೂ ಪಿಎಸ್‌ಐ ಆಗುಂಬೆ -9480803314 ಇವರುಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.

Related Articles

Latest Articles