ಮಿಸ್ ಗ್ಲೋಬ್ ಇಂಟರ್ನ್ಯಾಶನಲ್ 2025ನೇ ಅವರತ್ತಿಯ ಸೌಂದರ್ಯ ಸ್ಪರ್ಧೆ ಕಾಂಬೋಡಿಯಾ ಹಾಗೂ ಥೈಲ್ಯಾಂಡ್ನಲ್ಲಿ ಅದ್ಧೂರಿಯಾಗಿ ನಡೆದಿದ್ದು ಕರ್ನಾಟಕದ ಕರಾವಳಿ ಬೆಡಗಿ ಅಮೋಘ ಪ್ರದರ್ಶನ ನೀಡಿದ್ದಾರೆ.

ಮೀಸ್ ಟೀನ್ ಯುನಿವರ್ಸ್ 2023 ಸ್ಪರ್ಧೆಯ ವಿನ್ನರ್ ಆಗಿರುವ ಉಡುಪಿಯ ಬಾರ್ಕೂರು ಮೂಲದ ಸ್ವೀಝಲ್ ಫುರ್ಟಾಡೊ ಟಾಪ್ 20 ರಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟಲ್ಲದೆ ಬೆಸ್ಟ್ ಪೀಪಲ್ ಚಾಯ್ಸ್ನಲ್ಲೂ ಉತ್ತುಂಗದಲ್ಲಿದ್ದರು.

ಬೆಸ್ಟ್ ಇಂಟ್ರೋ ವಿಡಿಯೋ ಅವಾರ್ಡ್
ಟಾಪ್ 20ಯಲ್ಲಿ ಸ್ಥಾನ ಪಡೆದ ಬಾರ್ಕೂರು ಬೆಡಗಿ ಸ್ವೀಝಲ್ ಅಂತಿಮ ಹಂತ ತಲುಪಿಲ್ಲ. ತನ್ನ ಕಾಲು ನೋವಿನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಕಾಲು ನೋವಿನಲ್ಲೂ ರ್ಯಾಂಪ್ ವಾಕ್ ಮಾಡಿದ್ದಾರೆ. ಅಷ್ಟಲ್ಲದೆ ಬೆಸ್ಟ್ ಇಂಟ್ರೋ ವಿಡಿಯೋ ಆವಾರ್ಡ್ ತಮ್ಮದಾಗಿಸಿಕೊಂಡಿದ್ದಾರೆ.

ಆ ಮೂಲಕ ಕರಾವಳಿಯ ಮತ್ತೋರ್ವ ಚೆಲುವೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಕಾಲು ನೋವಿನ ನಡುವೆಯೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.