ಇಂಡಿಯನ್ ಪ್ರೀಮಿಯರ್ ಲೀಗ್ (IPL 2025)ನ 18ನೇ ಆವೃತ್ತಿಯು ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಅದಕ್ಕಾಗಿ ಎಲ್ಲಾ ತಂಡಗಳು ಸಿದ್ಧತೆ ಪ್ರಾರಂಭಿಸಿವೆ. ವಿರಾಟ್ ಕೊಹ್ಲಿ ಕೂಡ ಕೆಲವೇ ದಿನಗಳಲ್ಲಿ ಆರ್‌ಸಿಬಿ ಕ್ಯಾಂಪ್ ಸೇರಲಿದ್ದಾರೆ. ನಾಯಕ ರಜತ್ ಪಾಟಿದಾರ್ ಸೇರಿದಂತೆ ಹೆಚ್ಚಿನ ಆಟಗಾರರು ಆರ್‌ಸಿಬಿ ಕ್ಯಾಂಪ್ ಸೇರಿಕೊಂಡಿದ್ದಾರೆ.
ಇದರ ಮಧ್ಯೆ ಫ್ರಾಂಚೈಸಿ ತನ್ನ ಹೊಸ ಜೆರ್ಸಿಯನ್ನು ಅನಾವರಣ ಮಾಡಿದೆ. ಅಭಿಮಾನಿಗಳು ಜೆರ್ಸಿಯನ್ನು ಖರೀದಿಸಬಹುದಾಗಿದೆ. ಮಾರ್ಚ್ 17 ರಂದು ಆರ್‌ಸಿಬಿ ಅನ್ಬಾಕ್ಸ್ ಈವೆಂಟ್ ಇದೆ. ಈ ಕಾರ್ಯಕ್ರಮಕ್ಕೂ ಮೊದಲೇ ಜರ್ಸಿಯನ್ನು ಬಿಡುಗಡೆ ಮಾಡಿದೆ.
ಅಭಿಮಾನಿಗಳಿಗೆ ಯಾವಾಗ ಸಿಗುತ್ತೆ..?
ಪೂಮಾದಲ್ಲಿ ಮಾರ್ಚ್ 12 ಅಂದರೆ ಇಂದಿನಿಂದ ಆರ್‌ಸಿಬಿ ಜರ್ಸಿ ಲಭ್ಯ ಇರಲಿದೆ ಎಂದು ತಿಳಿಸಿದೆ. ಅಭಿಮಾನಿಗಳು ಜರ್ಸಿಯನ್ನು ಆರ್‌ಸಿಬಿ ವೆಬ್‌ಸೈಟ್ ಮತ್ತು ಪೂಮಾ ಇಂಡಿಯಾದ ವೆಬ್ಸೈಟ್ನಿಂದ ಖರೀದಿಸಬಹುದಾಗಿದೆ.