Sunday, November 3, 2024

ಯುವ ಕಾಂಗ್ರೆಸ್‌ ಸಾರಥ್ಯಕ್ಕೆ ಮಹಿಳೆಯರ ಮೇಲುಗೈ : ಈ ಬಾರಿ ಭಿನ್ನವಾಗಿ ಸದ್ದು ಮಾಡಿದ ಮಹಿಳೆಯರು

ಆ. 20ರಿಂದ ರಾಜ್ಯಾದ್ಯಂತ ಯುವ ಕಾಂಗ್ರೆಸ್‌ ಸದಸ್ಯತ್ವ ನೋಂದಣಿ ಆರಂಭವಾಗಿದ್ದು, ಸೆ. 20ಕ್ಕೆ ಮುಕ್ತಾಯವಾಗಲಿದೆ. ಮೊಬೈಲ್‌ ಆಪ್‌ನಲ್ಲಿ ನೋಂದಣಿಯಾಗಿ ಸದಸ್ಯತ್ವ ಪಡೆಯುತ್ತಿದ್ದಂತೆ ಮತದಾನಕ್ಕೆ ಅವಕಾಶ ಸಿಗುತ್ತಿದ್ದು, ಈವರೆಗೆ 14 ಲಕ್ಷಕ್ಕೂ ಹೆಚ್ಚು ಮಂದಿ ಮತ ಚಲಾಯಿಸಿದ್ದಾರೆ. ಇನ್ನೂ 4-5 ಲಕ್ಷ ಮತ ಚಲಾವಣೆಯಾಗುವ ನಿರೀಕ್ಷೆಯಿದೆ.

ಯುವ ಕಾಂಗ್ರೆಸ್‌ನಲ್ಲಿ ಹಾಲಿ ಉಪಾಧ್ಯಕ್ಷೆ ಆಗಿರುವ ದೀಪಿಕಾ ರೆಡ್ಡಿ ಹಾಗೂ ಹಾಲಿ ಕಾರ್ಯಾಧ್ಯಕ್ಷ ಎಚ್‌.ಎಸ್‌. ಮಂಜುನಾಥ್‌ ನಡುವೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಡ್ತಿ ಪಡೆಯಲು ತೀವ್ರ ಪೈಪೋಟಿ ನಡೆದಿದೆ. 

ಇತ್ತ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮಾಜಿ ಶಾಸಕ ಗೋಪಾಲ ಪೂಜಾರಿಯವರವರ ಪುತ್ರ ಸೂರಜ್ , ಸತೀಶ್ ಜಾರಕಿಹೊಳೆ ಪುತ್ರ ರಾಹುಲ್ ಜಾರಕಿಹೊಳೆ, ಶಿವನಾಂದ್ ಪಾಟೀಲ್ ರವರವ ಪುತ್ರ ಸತ್ಯಜಿತ್ ಪಾಟೀಲ್, ಮಾಲುರು ನಂಜೇಗೌಡ ಪುತ್ರ ಸುನೀಲ್ ಗೌಡ, ಪೂರ್ಣಿಮಾ ಶ್ರೀನಿವಾಸ ಪುತ್ರ ಬ್ರಿಜೆಷ್ ಯಾದವ್, ಆರ್.ಬಿ ತಿಮ್ಮಾಪುರ ಪುತ್ರ ವಿನಯ್ ತಿಮ್ಮಾಪುರ ರೊಂದಿಗೆ ಕಳೆದ ಬಾರಿ ಉಡುಪಿ ಜಿಲ್ಲಾ ಉಪಾಧ್ಯಕ್ಷೆಯಾಗಿ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರೆಯಾಗಿದ್ದ ಸುರೈಯ್ಯ ಅಂಜುಮ್ ಹೆಸರು ಪೈಪೋಟಿಯಲ್ಲಿ ಕೇಳಿಬಂದಿದೆ.

ಮಹಿಳೆಗೆ ಅವಕಾಶ?

ನೋಂದಾಯಿತ ಸದಸ್ಯರು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಮಹಿಳಾ ನಾಯಕಿಯರ ಪರ ಹೆಚ್ಚು ಒಲವು ತೋರಿಸಿದ್ದು ಕಂಡುಬಂದಿದೆ.

6 ಜನ ಕಾಂಗ್ರೆಸ್ ಘಟಾನುಘಟಿ ಶಾಸಕ ಸಚಿವರ ಮಕ್ಕಳ ಪ್ರಬಲ್ಯವಿದ್ದರು ಅಲ್ಪಸಂಖ್ಯಾತ ಸಮುದಾಯದಲ್ಲೇ ಅತಿ ಕಡಿಮೆ ಅವಧಿಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ಖ್ಯಾತಿ ಪಡೆದ ಸುರೈಯ್ಯ ಅಂಜುಮ್ ಹೆಸರು ಮುಂಚೂಣಿ ಪಡಿಯಲ್ಲಿದ್ದು ಇವರು ಕರಾವಳಿ ಭಾಗದ ಕಾಂಗ್ರೆಸ್ ನಾಯಕರೊಬ್ಬರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ‌.

ಇದೆ ಮೊದಲ ಬಾರಿಗೆ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಮಹಿಳೆಯರ ಪರ ಒಲವು ಇಷ್ಟರ ಮಟ್ಟಿಗೆ ಕಂಡುಬಂದಿದ್ದು ಅದರಲ್ಲೂ ಅಲ್ಪಸಂಖ್ಯಾತ ಮಹಿಳೆಯೊಬ್ಬರು ರಾಜದಾದ್ಯಂತ ಪೈಪೋಟಿ ನೀಡಿತ್ತಿದ್ದಾರೆ‌.

ಯಾರಿದು ಸುರೈಯ್ಯ ಅಂಜುಮ್?

ಕರಾವಳಿ ಭಾಗದಲ್ಲಿ ಪತ್ರಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಲೋಕಸಭಾ ಚುನಾವಣೆಯಲ್ಲಿ ಮಿಥುನ್ ರೈ ಪರ ಕ್ಯಾಂಪೇನ್ ಮಾಡಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದರು. ನಂತರ ರಮಾನಾಥ ರೈ, ಯು.ಟಿ ಖಾದರ್ ಆಪ್ತ ವಲಯಗಳಲ್ಲಿ ಗುರುತಿಸಿಕೊಂಡಿದ್ದರು. ಮಂಗಳೂರಿನಲ್ಲಿ ರಾಜಕೀಯ ಜೀವನ ಪ್ರಾರಂಭಿಸಿದರು ತಮ್ಮ ತವರು ಜಿಲ್ಲೆ ಉಡುಪಿ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದರು. ನಂತರ ದೆಹಲಿಯಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಗೆದ್ದು ಬಂದವರಲ್ಲಿ ಇವರೇ ಮೊದಲಿಗರು. ನಂತರ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರೆಯಾಗಿ ಕೇರಳ, ತೆಲಂಗಾಣ ರಾಜ್ಯದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು. ತದನಂದರ ಯುವ ಕಾಂಗ್ರೆಸ್ ನ ಈ ಬಾರಿಯ ಚುನಾವಣೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.

ಒಟ್ಟಿನಲ್ಲಿ ಅಧ್ಯಕ್ಷೀಯ ಸ್ಥಾನಕ್ಕೆ ದೀಪಿಕಾ ರೆಡ್ಡಿ ಪೈಪೋಟಿ ನೋಡಿದರೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಅಲ್ಪಸಂಖ್ಯಾತ ಸಮುದಾಯದಿಂದ ಬಂದ ಸುರೈಯ್ಯ ಅಂಜುಮ್ ಪೈಪೋಟಿ ನಡೆಸುತ್ತಿರುವುದು ಈ ಬಾರಿ ಯುವ ಕಾಂಗ್ರೆಸ್ ಸಮಿತಿಯಲ್ಲಿ ಮಹಿಳೆಯರೆ ಮೇಲುಗೈ ಸಾಧಿಸುವಲ್ಲಿ ಸಫಲಾಗುತ್ತಾರ ಎಂದು ಕಾದು ನೋಡಬೇಕು?!

Related Articles

Latest Articles