Monday, July 7, 2025

ರೈಲು ಹಳಿಗಳ ಮೇಲೆ ಗ್ಯಾಸ್ ಸಿಲಿಂಡರ್‍, ಸಿಮೆಂಟ್ ಬ್ಲಾಕ್‌..! ಜನರ ಜೀವದ ಜೊತೆ ಚೆಲ್ಲಾಟ

ದೇಶದ ನಾನ ಭಾಗದಲ್ಲಿ ದಿನೇ ದಿನೇ ರೈಲು ಹಳಿಗಳ ಮೇಲೆ ಅಪಾಯಕಾರಿ ವಸ್ತುಗಳನ್ನಿಟ್ಟು, ದುರಂತ ಸಂಭವಿಸುವ ಹಾಗೆ ಮಾಡುವ ಹುನ್ನಾರಗಳು ಹೆಚ್ಚಾಗುತ್ತಿವೆ. ವಂದೇ ಭಾರತ್ ರೈಲಿಗೆ ಕಲ್ಲು ಹೊಡೆಯುವುದರಿಂದ ಹಿಡಿದು ಆರಂಭವಾದ ಈ ಹುಚ್ಚಾಟಗಳು ಈಗ ಬೇರೆಯದ್ದೇ ಹಂತಕ್ಕೆ ಹೋಗಿವೆ.

ಕೆಲ ದಿನಗಳ ಹಿಂದಷ್ಟೇ ಉತ್ತರಪ್ರದೇಶದ ಕಾನ್ಪುರ ಬಳಿ ರೈಲ್ವೇ ಹಳಿ ಮೇಲೆ ದುಷ್ಕರ್ಮಿಗಳು ಗ್ಯಾಸ್ ಸಿಲಿಂಡರ್ ಇಟ್ಟಿದ್ದರು. ಈಗ ಮತ್ತೆ ಅಂತಹುದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ರಾಜಸ್ಥಾನದ ಅಜ್ಮೀರ್​ನಲ್ಲಿ ರೈಲ್ವೆ ಹಳಿಯ ಮೇಲೆ ಸಿಮೆಂಟ್ ಬ್ಲಾಕ್​ಗಳನ್ನು ಇಟ್ಟು ರೈಲು ಹಳಿ ತಪ್ಪಿಸುವಂತ ಮತ್ತೊಂದು ದುಷ್ಕೃತ್ಯ ನಡೆದಿದೆ.ಅಜ್ಮೀರ್​​ ಬಳಿಯ ಸರ್ದಾನಾ, ಬಂಗಾದ್​ ಗ್ರಾಮಗಳ ನಡುವೆ ಹಾಯ್ದು ಹೋಗುವ ರೈಲು ಹಳಿಯ ಮೇಲೆ ದುಷ್ಕರ್ಮಿಗಳು ಸಿಮೆಂಟ್ ಬ್ಲಾಕ್​ ಇಟ್ಟಿದ್ದು ಪತ್ತೆಯಾಗಿದೆ.

ಈ ಬಗ್ಗೆ ದೂರು ನೀಡಿದ ಪ್ರೈಟ್ ಕಾರಿಡಾರ್ ಕಾರ್ಪೋರೇಷನ್ ಅಧಿಕಾರಿಗಳು, ಭಾರತದಲ್ಲಿ ಆಗಸ್ಟ್​ 1 ರಿಂದ ಈ ರೀತಿಯ 18 ಕೇಸ್ ದಾಖಲಾಗಿರುವ ಬಗ್ಗೆ ಮಾಹಿತಿ ನೀಡಿದೆ. ಕಳೆದ ಎರಡು ವರ್ಷಗಳಲ್ಲಿ ಒಟ್ಟು 24 ರೈಲು ಹಳಿಗಳನ್ನು ತಪ್ಪಿಸುವಂತ ದುಷ್ಕೃತ್ಯ ನಡೆದಿದೆ.

Related Articles

Latest Articles