Thursday, April 10, 2025

ಗೋಚರಿಸಲಿದ್ದಾನೆ ಹಾಲಿನಂತ ಬೆಳದಿಂಗಳು ಸೂಸುವ ಸೂಪರ್‍ ಮೂನ್‌; ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುತ್ತದೆಯೇ?

ಇಂದು ಭೂಮಿಗೆ ಸೂಪರ್ ಮೂನ್ ಗೋಚರಿಸಲಿದ್ದಾನೆ. ಈ ಬಾರಿ ಸೆ.17 ಬುಧವಾರ ಆಕಾಶದಲ್ಲಿ ಕಾಣಿಸಿಕೊಳ್ಳುವ ಹುಣ್ಣಿಮೆ ಚಂದ್ರನ ಬೆಳದಿಂಗಳು ಹಾಲು ಚೆಲ್ಲಿದಂತೆ ಗೋಚರಿಸಲಿದೆ ಎಂದು ಖ್ಯಾತ ಖಗೋಳ ಶಾಸ್ತ್ರಜ್ಞ ಹಾಗೂ ವಿಜ್ಞಾನಿ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

ಭಾದ್ರಪದದ ಈ ಹುಣ್ಣಿಮೆ ವರ್ಷದ ಅತ್ಯಂತ ಸುಂದರ ಹುಣ್ಣಿಮೆ. ಇದು ಸೂಪರ್‌ಮೂನ್ ಆಗಿರಲಿದೆ. ಈ ವರ್ಷದ ನಾಲ್ಕು ಸೂಪರ್ ಮೂನ್ ಹುಣ್ಣಿಮೆಗಳಲ್ಲಿ ಈ ತಿಂಗಳಿನ ಸೂಪರ್‌ಮೂನ್ ಹುಣ್ಣಿಮೆ ಭವ್ಯವಾದುದು ಎಂದು ಡಾ. ಎಪಿ ಭಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನು ಸೂಪರ್ ಮೂನ್ ದಿನದಂದೇ ಚಂದ್ರಗ್ರಹಣದ ವಿದ್ಯಾಮಾನ ನಡೆಯುತ್ತದೆ. ಈ ವರ್ಷ ಗ್ರಹಣದ ಸಮಯ ಯಾವುದು ಮತ್ತು ಭಾರತೀಯರೂ ಈ ಚಂದ್ರಗ್ರಹಣವನ್ನು ವೀಕ್ಷಿಸಲು ಸಾಧ್ಯವಾಗುತ್ತದೆಯೇ ಎಂದು ಇಲ್ಲಿ ತಿಳಿಯೋಣ.

ಭಾರತೀಯ ಕಾಲಮಾನದ ಪ್ರಕಾರ ವರ್ಷದ ಎರಡನೇ ಚಂದ್ರಗ್ರಹಣವು ಸೆಪ್ಟೆಂಬರ್ 18 ರಂದು ಬೆಳಿಗ್ಗೆ 6:12 ಕ್ಕೆ ಪ್ರಾರಂಭವಾಗುತ್ತದೆ. ಮತ್ತು 10.17ಕ್ಕೆ ಮುಕ್ತಾಯವಾಗಲಿದೆ. 7.42ಕ್ಕೆ ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ. ಬೆಳಗ್ಗೆ 8:14ಕ್ಕೆ ಚಂದ್ರಗ್ರಹಣ ಉತ್ತುಂಗದಲ್ಲಿರಲಿದೆ.

ಈ ಅರ್ಥದಲ್ಲಿ, ವರ್ಷದ ಎರಡನೇ ಚಂದ್ರಗ್ರಹಣವು ಒಟ್ಟು 4 ಗಂಟೆ 5 ನಿಮಿಷಗಳವರೆಗೆ ಇರುತ್ತದೆ. ಈ ಬಾರಿ ಗ್ರಹಣದ ಸೂತಕದ ಯಾವುದೇ ಪರಿಣಾಮ ಕಂಡುಬರುವುದಿಲ್ಲ. ಏಕೆಂದರೆ ಈ ಬಾರಿಯ ಚಂದ್ರಗ್ರಹಣದ ಸಮಯದಲ್ಲಿ ಭಾರತದಲ್ಲಿ ಹಗಲು ಇರುತ್ತದೆ. ಆದ್ದರಿಂದ ಈ ಗ್ರಹಣವು ಭಾರತದ ಜನರಿಗೆ ಗೋಚರಿಸುವುದಿಲ್ಲ.

Related Articles

Latest Articles