ತೆಲಂಗಾಣದ ಕಂದಾಯ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಅವರು ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ಅನ್ನದಾನಕ್ಕಾಗಿ ₹ 1 ಕೋಟಿ ನೀಡಿ ಹರಕೆ ಸೇವೆ ಪೂರೈಸಿದರು.
‘ಮಗಳ ಮದುವೆಗಾಗಿ ಮಾಡಿದ ಪ್ರಾರ್ಥನೆ ಫಲಿಸಿದ್ದರಿಂದ ಕುಟುಂಬದೊಂದಿಗೆ ಬಂದು ಅವರು ಸೇವೆ ಪೂರೈಸಿದರು’ ಎಂದು ದೇವಸ್ಥಾನದವರು ತಿಳಿಸಿದರು.
ಪ್ರಸಾದ್ ರೆಡ್ಡಿ, ಪ್ರೊ.ಗಣಪತಿ ಭಟ್, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿಜಿಎಸ್‌ಎನ್ ಪ್ರಸಾದ್, ಪ್ರಸನ್ನ ದರ್ಭೆ, ಶ್ರೀವತ್ಸಾ, ಲೋಕೇಶ್ ಮುಂಡೊಕಜೆ, ಶೋಭಾ ಗಿರಿಧರ್, ವನಜಾ ಭಟ್ ಇದ್ದರು.