Wednesday, February 19, 2025

ಕೋಲಾರ ಚಿನ್ನದ ಗಣಿಯ ಕರಾಳ ಕಥೆ ಹೇಳಲಿದೆ ತಮಿಳಿನ ಈ ಸಿನಿಮಾ..! ತಾರಾಗಣದಲ್ಲಿ ‌ಯಾರಿದ್ದಾರೆ ಗೊತ್ತಾ.?

ಕನ್ನಡದ ಸೂಪರ್ ಹಿಟ್ ‘ಕೆಜಿಎಫ್’ ಚಿತ್ರದಲ್ಲಿ ಕೋಲಾರದ ಚಿನ್ನದ ಗಣಿಯನ್ನು ತೋರಿಸಲಾಗಿತ್ತು. ಆದರೆ, ಇಲ್ಲಿ ಇದ್ದಿದ್ದೆಲ್ಲವೂ ಕಾಲ್ಪನಿಕ ಕಥೆ. ಆದರೆ, ‘ತಂಗಳಾನ್’ ಚಿತ್ರದಲ್ಲಿ ಕೆಜಿಎಫ್​ನ ನೈಜ ಕಥೆ ಹೇಳಲಾಗುತ್ತಿದೆ. ಇಲ್ಲಿನ ಕಾರ್ಮಿಕರ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗುತ್ತಿದೆ.

ನಿರ್ದೇಶಕ ಪಾ. ರಂಜಿತ್ ನಿರ್ದೇಶನದ ತಂಗಳಾನ್ ಸಿನೆಮಾದಲ್ಲಿ ಚಿಯಾನ್ ವಿಕ್ರಮ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿಸಿದ್ದಾರೆ‌. ಈ ಚಿತ್ರದ ಫಸ್ಟ್ ಲುಕ್ ರಿವೀಲ್ ಆದಾಗಿನಿಂದಲೂ ಸಿನಿಮಾ ಬಗ್ಗೆ ಹೈಪ್ ಸೃಷ್ಟಿ ಆಗಿದೆ.

ಈ ಚಿತ್ರದ ಕಥೆ ಸಾಗೋದು 19ನೇ ಶತಮಾನದಲ್ಲಿ. ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ವಿಶೇಷ ಎಂದರೆ ಈ ಚಿತ್ರವನ್ನು ಕೋಲಾರದಲ್ಲಿರುವ ಚಿನ್ನದ ಗಣಿಯಲ್ಲಿಯೇ ಶೂಟ್ ಮಾಡಲಾಗಿದೆ.

ಈ ಸಿನಿಮಾ ಕೋಲಾರ ಚಿನ್ನದ ಗಣಿಯ ನೈಜ ಕಥೆಯನ್ನು ಹೇಳಲಿದೆ. ಒಂದು ಸಾವಿರ ವರ್ಷಗಳ ಹಿಂದೆ ಕೋಲಾರ ಚಿನ್ನದ ಗಣಿಯನ್ನು ಬ್ರಿಟಿಷರು ಕಂಡುಹಿಡಿದರು. ಅದನ್ನು ಅವರು ತಮ್ಮ ಸ್ವಂತ ಉದ್ದೇಶಗಳಿಗಾಗಿ ಬಳಸಿಕೊಂಡರು ಮತ್ತು ಲೂಟಿ ಮಾಡಿದರು. ಈ ವೇಳೆ ಕಾರ್ಮಿಕರಿಗೆ ಸಾಕಷ್ಟು ಹಿಂಸೆ ನೀಡಲಾಗಿತ್ತು. ಇದನ್ನು ಸಿನಿಮಾದಲ್ಲಿ ತೋರಿಸಲಾಗುತ್ತಿದೆ.

‘ತಂಗಳಾನ್’ ಸಿನಿಮಾದ ಟೀಸರ್ ಈಗಾಗಲೇ ರಿಲೀಸ್ ಆಗಿ ಗಮನ ಸೆಳೆದಿದೆ. ಈ ಚಿತ್ರದ ರಿಲೀಸ್ ಡೇಟ್ ಇನ್ನೂ ಘೋಷಣೆ ಆಗಿಲ್ಲ. 2024 ಏಪ್ರಿಲ್​ನಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ತಮಿಳು ಮಾತ್ರವಲ್ಲದೆ ಕನ್ನಡ, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಪಸುಪತಿ, ಮಾಳವಿಕಾ ಮೋಹನನ್, ಹರಿ, ಮುತ್ತುಕುಮಾರ್, ಪಾರ್ವತಿ ತಿರುವೊತ್ತು ಹೀಗೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.

Related Articles

Latest Articles