ವಿವಾಹಿತ ಮಹಿಳೆ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ ಘಟನೆ ಪೀಣ್ಯಾದಲ್ಲಿ ಬೆಳಕಿಗೆ ಬಂದಿದೆ. ಮೃತಳನ್ನು ಚೈತ್ರಾ ಎಂದು ಗುರುತಿಸಲಾಗಿದೆ.
ಮೃತ ಚೈತ್ರಾ ಕುಟುಂಬಸ್ಥರು ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಅಳಿಯ ಸಂತೋಷನೇ ಕೊಲೆ ಮಾಡಿ ನೇಣು ಹಾಕಿದ್ದಾನೆ ಅಂತ ಆರೋಪಿಸಿದ್ದಾರೆ.
ರಾಮನಗರ ಮೂಲದ ಮೃತ ಚೈತ್ರಾ ಐದು ವರ್ಷಗಳ ಹಿಂದೆ ಪೀಣ್ಯಾದಲ್ಲಿ ಕ್ಯಾಬ್ ಡ್ರೈವರ್ ಆಗಿದ್ದ ದೂರದ ಸಂಬಂಧಿ ಸಂತೋಷ್ ನನ್ನ ಪ್ರೀತಿಸಿ ಮದುವೆಯಾಗಿದ್ದಳು. ಅಳಿಯ ವರದಕ್ಷಿಣೆಗಾಗಿ ಮೃತ ಚೈತ್ರಾಗೆ ಹಿಂಸೆ ನೀಡುತ್ತಿದ್ದ. ಇತ್ತೀಚೆಗೆ ಐದು ಲಕ್ಷ ರೂಪಾಯಿ ಸಹ ನೀಡಿದ್ವಿ, ಆದ್ರೂ, ಸುಮ್ಮನಾಗದೇ ಮಗಳಿಗೆ ದೈಹಿಕ ಮಾನಸಿಕವಾಗಿ ಹಿಂಸೆ ನೀಡಿ ಕೊಲೆ ಮಾಡಿದ್ದಾನೆಂದು ಆರೋಪಿಸಿದ್ದಾರೆ.
ಸದ್ಯ ಮೃತ ಚೈತ್ರಾ ಕುಟುಂಬಸ್ಥರಿಂದ ಪತಿ ಸಂತೋಷ್ ಹಾಗೂ ಕುಟುಂಬಸ್ಥರ ವಿರುದ್ಧ ಪೀಣ್ಯಾ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಂತೋಷ್ ಹಾಗೂ ಆತನ ಮನೆಯವರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.