Friday, June 27, 2025

ಸದ್ದಿಲ್ಲದೆ ಬ್ಯಾಗ್‌ನಲ್ಲಿ ಅವಿತುಕೊಂಡ ಹಾವು..! ಪೋಷಕರೇ ಎಚ್ಚರ ವಹಿಸಿ

ಬೇಸಿಗೆ ಕಾಲದಲ್ಲಿ ಹಾವುಗಳು ನೆರಳಿನ ಆಶ್ರಯ ಪಡೆಯುತ್ತದೆ. ಶೂ, ಕಾರುಗಳಲ್ಲಿ ಅಡಗಿ ಕೂತು ಜೀವಕ್ಕೆ ಸಂಚಕಾರ ಉಂಟಾಗುತ್ತದೆ. ಆದರೆ ಮಳೆಗಾಲದಲ್ಲಿ ಈ ರೀತಿಯಾಗಲ್ಲ ಎಂದರೆ ಅದು ತಪ್ಪು. ಕೇರಳದಲ್ಲಿ ಹಾವೊಂದು ಬ್ಯಾಗ್‌ನಲ್ಲಿ ಅವಿತು ಕೂತ ಘಟನೆ ತ್ರಿಶೂರ್‌ನಿಂದ ವರದಿಯಾಗಿದೆ.

ಚೇಲಕ್ಕರದಲ್ಲಿ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಹಾವು ಪತ್ತೆಯಾಗಿದೆ. ಪಸಯನ್ನೂರಿನ ಪ್ಲಸ್ ಟು ವಿದ್ಯಾರ್ಥಿನಿಯ ಬ್ಯಾಗ್ ನೊಳಗೆ ಹಾವು ಹರಿದಾಡಿದೆ. ಎಲ್‌ಎಫ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಎಂದಿನಂತೆ ಮೊದಲ ಅವಧಿಯಲ್ಲಿ ಪುಸ್ತಕ ತೆಗೆದುಕೊಳ್ಳಲೆಂದು ಬ್ಯಾಗ್‌ಗೆ ಕೈ ಹಾಕಿದ್ದಾಳೆ. ಆಗ ಏನೋ ಕೈಗೆ ಬಡಿದುದ್ದು ಗಮನಕ್ಕೆ ಬಂದಾಗ ನೋಡಿದ್ದಾಳೆ. ತಕ್ಷಣ ಚೀಲವನ್ನು ಎತ್ತಿ ನೋಡಿದಾಗ ಹಾವು ಬ್ಯಾಗ್‌ನಲ್ಲಿರುವುದು ತಿಳಿದುಬಂದಿದೆ.

ಇದನ್ನು ನೋಡಿದ ಸಹಪಾಠಿ ಕೂಡಲೇ ಬ್ಯಾಗ್‌ನ ಮುಚ್ಚಳವನ್ನು ಮುಚ್ಚಿದ್ದಾರೆ. ತರಗತಿಯ ಹೊರಗೆ ತೆಗೆದುಕೊಂಡು ಹೋಗಿ ನಂತರ ಕೊಲ್ಲಲಾಗಿದೆ. ವಿದ್ಯಾರ್ಥಿಯ ಮನೆಯಲ್ಲಿ ಚೀಲ ಇಟ್ಟಿರುವಾಗ ಹಾವು ಪ್ರವೇಶಿಸಿರಬಹುದು ಎಂದು ತೀರ್ಮಾನಿಸಲಾಗಿದೆ. ಮಳೆಗಾಲವಾಗಿರುವುದರಿಂದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಪಾಲಕರು ಎಚ್ಚರಿಕೆಯಿಂದ ಇರುವಂತೆ ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ ಮರಿಯಾ ಸೂಚಿಸಿದ್ದಾರೆ.

Related Articles

Latest Articles