ಮಹಾರಾಷ್ಟ್ರ: ಕಾರು ಕಾಲುವೆಗೆ ಉರುಳಿ ಬಿದ್ದು ಒಂದೇ ಕುಟುಂಬದ ಆರು ಜನರು ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಅಪಘಾತದಲ್ಲಿ ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಬಳಿ ಕಾರು ಅಪಘಾತವಾಗಿದೆ. ಮಧ್ಯರಾತ್ರಿ 12;30 ವೇಳೆಗೆ ಆಲ್ಟೋ ಕಾರು ಚಿಂಚಣಿ ಪ್ರದೇಶದಲ್ಲಿರುವ ಟಕಾರಿ ನಾಲೆಗೆ ಉರುಳಿ ಬಿದ್ದಿದೆ. ಪರಿಣಾಮ 6 ಜನರು ಮೃತಪಟ್ಟಿದ್ದಾರೆ.
ಮೃತರನ್ನು ಸಿವಿಲ್ ಇಂಜಿನಿಯರ್ ಜಗನ್ನಾಥ್ ಪಾಟೀಲ್ (60) ಪತ್ನಿ ಸುಜಾತ ಪಾಟೀಲ್ (55) ಪುತ್ರಿ ಪ್ರಿಯಾಂಕಾ ಖರಾಡೆ (30), ಮೊಮ್ಮಗಳು ಧ್ರುವ (3), ರಾಜೀವಿ(2) ಮತ್ತು ಕಾರ್ತಿಕಿ (1) ಸಾವನ್ನಪ್ಪಿದ್ದಾರೆ. ಮತ್ತೋರ್ವ ಪುತ್ರಿ ಸ್ವಪ್ನಲಿ(30) ಗಾಯಗೊಂಡಿದ್ದಾರೆ.