Sunday, July 6, 2025

ಬಿಸಾಕಿದ್ದ ಊಟ ತಿಂದು 17 ಮೇಕೆಗಳು ಮೃತ್ಯು

ಚಿತ್ರದುರ್ಗ: ಬಿಸಾಕಿದ್ದ ಊಟ ತಿಂದು 17 ಮೇಕೆಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಚಳ್ಳಕೆರೆ ತಾಲೂಕಿನ ಗೌರಸಮುದ್ರ ಕಾವಲಿನಲ್ಲಿ ಮಾರಮ್ಮದೇವಿ ಜಾತ್ರೆ ನಡೆಯುವ ಸ್ಥಳದಲ್ಲಿ ಭಕ್ತರು ಅರಕೆ ತೀರಿಸಲು ಬಾಡೂಟ ಮಾಡಿ ಸವಿದು ಉಳಿದ ಉಳಿದ ಅನ್ನವನ್ನು ಸ್ಥಳದಲ್ಲೇ ಎಸೆದು ಹೋಗಿದ್ದಾರೆ.

ಎಂದಿನಂತೆ ಮೇಕೆಗಳು ಮೇಯಲು ಹೋದಾಗ ಈ ಅನ್ನವನ್ನು ತಿಂದಿವೆ.‌ ಆ ಪೈಕಿ 17 ಮೇಕೆಗಳು ಅಸ್ವಸ್ಥಗೊಂಡು ಮೃತಪಟ್ಟಿವೆ. ಸ್ಥಳಕ್ಕೆ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ‌.‌

ಮೇಕೆಗಳ ಸಾವಿಗೆ ಇದೇ ಆಹಾರ ಕಾರಣವ ಅಥವಾ ಅದರ ಬೇರೆ ಏನಾದರೂ ವಿಷ ಪದಾರ್ಥ ಮಿಶ್ರಗೊಂಡಿದೆಯಾ ಎಂದು ಸ್ಪಷ್ಟವಾಗಿಲ್ಲ.

Related Articles

Latest Articles