ಬಿಹಾರ: ಅಕ್ಟೋಬರ್ 29 ರಂದು ಪಾಟ್ನಾದ ಫುಲ್ವಾರಿ ಷರೀಫ್ ಪ್ರದೇಶದಲ್ಲಿ ನವವಿವಾಹಿತ ಮಹಿಳೆ ಮದುವೆಯಾದ 12 ಗಂಟೆಗಳಲ್ಲಿ ತನ್ನ ಪತಿಗೆ ತ್ರಿವಳಿ ತಲಾಖ್ ನೀಡಿದ್ದಾಳೆ.
ವರ ಗುಲಾಂ ನಬಿ ನಾವಡಾದ ಅನ್ಸಾರ್ ನಗರದ ನಿವಾಸಿಯಾಗಿದ್ದಾನೆ. ಫುಲ್ವಾರಿ ಷರೀಫ್‌ನ ಇಮಾಮ್ ಕಾಲೋನಿಯಲ್ಲಿರುವ ಸಮುದಾಯ ಕೇಂದ್ರದಲ್ಲಿ ವಿವಾಹವನ್ನು ನಡೆಸಲಾಗಿದೆ. ಮದುವೆ ಸಮಾರಂಭದಲ್ಲಿ ಊಟದ ವಿಚಾರವಾಗಿ ವಧು-ವರರ ಕಡೆಯವರ ನಡುವೆ ಜಗಳವಾಗಿತ್ತು. ಮದುವೆ ವೇಳೆ ಊಟ ಬಡಿಸುತ್ತಿರುವ ಬಗ್ಗೆ ವರನ ಕಡೆಯವರು ಕೆಲವು ಆರೋಪ ಮಾಡಿ ದೂರಿದ್ದಾರೆ. ಈ ವಿಚಾರವಾಗಿ ಇಬ್ಬರ ಕುಟುಂಬದ ನಡುವೆ ವಾಗ್ವಾದ ನಡೆದಿದೆ.
ಕೂಡಲೇ ವರ ಗುಲಾಂ ನಬಿ ವಧುವಿನ ಸಹೋದರನೊಂದಿಗೆ ಮಾತಿನ ಚಕಮಕಿ ನಡೆಸಿ ನಬಿಗೆ ಹೊಡೆದಿದ್ದಾನೆ. ಎರಡೂ ಕಡೆಯ ಪೋಷಕರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರು, ಆದರೆ ಪರಿಸ್ಥಿತಿ ಹತೋಟಿ ಮೀರಿದ್ದರಿಂದ ವಿಫಲವಾಯಿತು.
ವಧು ಅಂತಿಮವಾಗಿ ಮದುವೆಯನ್ನು ಮುರಿಯಲು ನಿರ್ಧರಿಸಿದ್ದಾಳೆ. ಎರಡೂ ಕುಟುಂಬಗಳು ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರೂ ವ್ಯರ್ಥವಾಗಿದೆ. ಮದುವೆಯಾದ 12 ಗಂಟೆಗಳಲ್ಲಿ (ಭಾನುವಾರ ಬೆಳಗ್ಗೆ) ಮಹಿಳೆ ವರನಿಗೆ ತ್ರಿವಳಿ ತಲಾಖ್ ನೀಡಿದ್ದಾಳೆ.
- ಗಂಡ ಸ್ನಾನ ಮಾಡೋದಿಲ್ಲ…! 40 ದಿನದ ನವವಿವಾಹಿತೆ ನಿರ್ಧಾರಕ್ಕೆ ಎಲ್ಲರೂ ಶಾಕ್
- ವಿಭಿನ್ನ ಸನ್ನಿವೇಶಕ್ಕೆ ಸಾಕ್ಷಿಯಾದ ಬಂಟ್ವಾಳ: ಒಂದೆಡೆ ಉದ್ವಿಗ್ನ, ಮತ್ತೊಂದಡೆ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
- ಉಪ್ಪಿನಂಗಡಿ: ವಿದ್ಯಾರ್ಥಿ ತಪ್ಪು ಮಾಡಿದ್ದಕ್ಕೆ ಬೆತ್ತದಿಂದ ಹೊಡೆದ ಶಿಕ್ಷಕ – ಪ್ರಕರಣ ದಾಖಲು
- ವಿಶ್ವದ ದೈತ್ಯ ಬಾಡಿಬಿಲ್ಡರ್ ಗೋಲೆಮ್ ಹೃದಯಾಘಾತದಿಂದ ನಿಧನ