Friday, July 19, 2024

ಅಕ್ಟೋಬರ್​ನಲ್ಲಿ ತೆರೆಗೆ ಬರಲ್ಲ ‘ಸಪ್ತ ಸಾಗರದಾಚೆ ಎಲ್ಲೋ-ಸೈಡ್​ ಬಿ’?; ಚಿತ್ರತಂಡದ ಪ್ಲ್ಯಾನ್ ಏನು.!?

ರಕ್ಷಿತ್ ಶೆಟ್ಟಿ ನಟನೆಯ ಭಿನ್ನ ಕಥಾಹಂದರ, ಸಿನಿ ಲೋಕದಲ್ಲಿ ವಿಶಿಷ್ಟ ಪ್ರಯೋಗ ಎನಿಸಿಕೊಂಡ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು.

ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ‘ಸೈಡ್ ಬಿ’ಗಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಕೆಲವು ವರದಿಗಳ ಪ್ರಕಾರ ಸಿನಿಮಾ ರಿಲೀಸ್ ದಿನಾಂಕ ಮತ್ತಷ್ಟು ಮುಂದಕ್ಕೆ ಹೋಗುವ ಸಾಧ್ಯತೆ ಇದೆಯಂತೆ. ನವೆಂಬರ್ ವೇಳೆಗೆ ಸಿನಿಮಾನ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ರಕ್ಷಿತ್ ಶೆಟ್ಟಿ ಮತ್ತು ತಂಡ ಪ್ಲಾನ್ ಮಾಡಿಕೊಂಡಿದೆಯಂತೆ.

ಸೆಪ್ಟೆಂಬರ್ 1ರಂದು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರದ ಮುಂದುವರಿದ ಭಾಗ ‘ಎಸ್​ಎಸ್​ಇ ಸೈಡ್ ಬಿ’ ಅಕ್ಟೋಬರ್ 19ರಂದು ರಿಲೀಸ್ ಆಗಬೇಕಿತ್ತು. ಆದರೆ, ಒಂದು ವಾರ ತಡವಾಗಿ ಸಿನಿಮಾ ತೆರೆಗೆ ತರುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಆದರೆ, ನಿರ್ದೇಶಕ ಹೇಮಂತ್ ರಾವ್ ಹಾಗೂ ರಕ್ಷಿತ್ ಪ್ಲಾನ್ ಬದಲಿಸಿದ್ದಾರೆ. ನವೆಂಬರ್​ನಲ್ಲಿ ಸಿನಿಮಾನ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಇವರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ರಕ್ಷಿತ್ ಶೆಟ್ಟಿ ಅವರು ಸಿನಿಮಾ ಪ್ರಚಾರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಆದರೆ, ‘ಸಪ್ತ ಸಾಗರದಾಚೆ ಎಲ್ಲೋ-ಸೈಡ್ ಬಿ’ ರಿಲೀಸ್​ಗೆ ಇನ್ನು ಕೆಲವೇ ದಿನ ಬಾಕಿ ಇದ್ದರೂ ಇನ್ನೂ ಅವರು ಪ್ರಮೋಷನ್ ಆರಂಭಿಸಿಲ್ಲ. ಟ್ರೇಲರ್ ರಿಲೀಸ್ ಬಗ್ಗೆಯೂ ಯಾವುದೇ ಮಾಹಿತಿ ಕೊಟ್ಟಿಲ್ಲ. ಇದು ಕೂಡ ಅನುಮಾನ ಹೆಚ್ಚಲು ಪ್ರಮುಖ ಕಾರಣವಾಗಿದೆ.

Related Articles

Latest Articles