ಮಹಾರಾಷ್ಟ್ರ: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರು ಆನ್ಲೈನ್ ಗೇಮಿಂಗ್ ನಲ್ಲಿ 1.5 ಕೋಟಿ ಗೆದ್ದ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಬೇಕೆಂಬ ಆಕ್ರೋಶ ಕೇಳಿಬಂದಿದೆ. ಪಿಂಪ್ರಿ ಚಿಂಚ್ವಾಡ್ ನಗರದ ಸೋಮನಾಥ್ ಝೆಂಡೆ ಕೋಟಿ ಗೆದ್ದ ಪೊಲೀಸ್ ಅಧಿಕಾರಿ.
ಕರ್ತವ್ಯದ ವೇಳೆ ಆನ್ಲೈನ್ ಗೇಮಿಂಗ್ ನಲ್ಲಿ ತೋಡಗಿದ್ದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡ ಅಮೋಲ್ ಥೋರಟ್, ಗೃಹ ಸಚಿವ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದಿದ್ದಾರೆ.

ಪಿಎಸ್ಐ ಸೋಮನಾಥ್ ಝೆಂಡೆ ಅವರನ್ನು ಪಿಂಪ್ರಿ ಚಿಂಚ್ವಾಡ್ ಪೊಲೀಸ್ ಹೆಡ್ ಕ್ವಾರ್ಟರ್ಸ್ ನಲ್ಲಿ ಆರ್ಸಿಪಿಯಲ್ಲಿ ನಿಯೋಜಿಸಲಾಗಿದೆ. ಮಂಗಳವಾರ ಬಾಂಗ್ಲಾದೇಶ ವಿರುದ್ಧ ಇಂಗ್ಲೆAಡ್ನ ಕ್ರಿಕೆಟ್ ಪಂದ್ಯದಲ್ಲಿ ಅವರ ತಂಡವು ಆನ್ಲೈನ್ ಗೇಮಿಂಗ್ ಆಯಪ್ ನಲ್ಲಿ 1.5 ಕೋಟಿ ಬಹುಮಾನ ಗೆದ್ದಿದ್ದರು ಎನ್ನಲಾಗಿದೆ.ಇದೀಗ ಪಿಎಸ್ಐ ಸೋಮನಾಥ್ ಝೆಂಡೆ ಅವರು ವಿವಾದದ ಸುಳಿಗೆ ಸಿಲುಕಿದ್ದಾರೆ.
ಆನ್ಲೈನ್ ಆಟಗಳಿಂದ ದೂರವಿರಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಗೃಹ ಸಚಿವ ದೇವೇಂದ್ರ ಫಡ್ನವೀಸ್ಗೆ ಬರೆದ ಪತ್ರದಲ್ಲಿ ಬಿಜೆಪಿ ನಾಯಕ ಅಮೋಲ್ ಘೋರತ್ ತಿಳಿಸಿದ್ದಾರೆ. ಪಿಂಪ್ರಿ-ಚಿAಚ್ವಾಡ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯದ ವೇಳೆ ಆನ್ಲೈನ್ ಗೇಮಿಂಗ್?ನಲ್ಲಿ ತೊಡಗಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸೋಮನಾಥ್ ಝೆಂಡೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಪಿಎಸ್ಐ ಸೋಮನಾಥ್ ಝೆಂಡೆ ಖಾಕಿ ಸಮವಸ್ತ್ರದಲ್ಲಿರುವ ಫೋಟೋಗಳು ಮತ್ತು ವಿಡಿಯೋಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದು ರಾಜ್ಯ ಪೊಲೀಸ್ ಪಡೆ ಬಗ್ಗೆ ತಪ್ಪು ಸಂದೇಶ ರವಾನೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸೋಮನಾಥ್ ಝೆಂಡೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಮೋಲ್ ಥೋರಟ್ ಒತ್ತಾಯಿಸಿದ್ದಾರೆ.