Monday, September 16, 2024

ಹಾಯ್ ಫ್ರೆಂಡ್ಸ್‌ ಅನ್ನುತ್ತಲೇ ಕನ್ನಡದ ಫೇಮಸ್‌ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ರೀಲ್ಸ್‌ ರಾಣಿ ರೇಷ್ಮಾ!

ಸೋಷಿಯಲ್​ ಮೀಡಿಯಾ ಹವಾ ಶುರುವಾಗಿ ಬೂಮ್​ ಆದಾಗಿಂದ ಪ್ರತಿ ಊರು ಕೇರಿಯಲ್ಲಿ ಹತ್ತಾರು ಮಂದಿ ಕಿಲಾಡಿಗಳು ಹುಟ್ಟಿಕೊಂಡಿದ್ದಾರೆ. ಮಕ್ಕಳು, ಕಾಲೇಜು ಹುಡುಗರು, ಅಜ್ಜ-ಅಜ್ಜಿ, ಮದ್ಯಮ ವಯಸ್ಸಿನವರೂ‌ ಸಹ ರೀಲ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ರೀಲ್ಸ್​ನಲ್ಲಿ ಹವಾ ಸೃಷ್ಟಿಸಿ ದೊಡ್ಡ ದೊಡ್ಡ ವೇದಿಕೆಯಲ್ಲಿ ಅವರಿಗೆ ಅವಕಾಶಗಳು ಸಿಗ್ತಿವೆ ಅನ್ನೋದು ಸತ್ಯ. ರೀಲ್ಸ್​ ರಾಣಿ ಅಂತಾನೇ ಫೇಮಸ್​ ಆಗಿರುವ ರೇಷ್ಮಾ ಅವರು ಇನ್ಮುಂದೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

ರೀಲ್ಸ್​ ಮೂಲಕ ತಮ್ಮ ಕಷ್ಟ ಸುಖ ಹೇಳಿಕೊಳ್ತಾ ಜನರ ಜೊತೆ ಕನೆಕ್ಟ್​ ಆಗಿರೋ ರೇಷ್ಮಾ ಅವರು ಗಿಚ್ಚಿ ಗಿಲಿಗಿಲಿ ಶೋಗೆ ಪ್ರವೇಶ ಮಾಡಿದ್ದಾರೆ. ರೀಲ್ಸ್​​ನಲ್ಲಿ ಅಧಿಕ ಫಾಲೋವರ್ಸ್, ಅಭಿಮಾನಿಗಳನ್ನ ಹೊಂದಿರೋ ರೇಷ್ಮಾ ಯುನಿಕ್​ ಸ್ಟೈಲ್​ಗೆ ಕಾಮಿಡಿ ಶೋ ಒಲಿದು ಬಂದಿದೆ.

ಕಳೆದ ಭಾನುವಾರದ ಸಂಚಿಕೆಯಲ್ಲಿ ಪಾದಾರ್ಪಣೆ ಮಾಡಿರೋ ರೇಷ್ಮಾ ಅವರು ಮುಂದಿನ ವಾರದಿಂದ ಗಿಚ್ಚಿ ಗಿಲಿಗಿಲಿ ಸೀಸನ್​ 3ರ ಅಧಿಕೃತ ಸ್ಪರ್ಧಿ ಆಗಲಿದ್ದಾರೆ. ಇಷ್ಟು ದಿನ ರೀಲ್ಸ್​ನಲ್ಲಿ ರಂಜಿಸುತ್ತಿದ್ದ ರೇಷ್ಮಾ ಅವರು ಇನ್ಮುಂದೆ ಕಾಮಿಡಿ ಸ್ಕಿಟ್​ಗಳ ಮೂಲಕ ಟಿವಿ ಪರದೆ ಮೇಲೆ ಕಾಣಿಸಿಕೊಳ್ಳಲ್ಲಿದ್ದಾರೆ.

Related Articles

Latest Articles