ಝೀ ಕನ್ನಡದಲ್ಲಿ ಪ್ರಸಾರ ಆಗುವ ಶೋಗಳೆಂದರೆ ಕೇಳಬೇಕೇ? ಟಿಆರ್‌ಪಿಯಲ್ಲಿ ಸದಾ ಮುಂದಿರುವ ಈ ವಾಹಿನಿಯಲ್ಲಿ ಹಲವಾರು ರಿಯಾಲಿಟಿ ಶೋ ಗಳು ನಡೆದಿದೆ. ಈ ಬಾರಿ ಹೊಸ ಶೋ ಪ್ರಸಾರ ಆಗಲು ಹೊರಟಿದೆ. ಅದುವೇ ಮಹಾನಟಿ..!
ರಮೇಶ್ ಅರವಿಂದ್, ಪ್ರೇಮ, ನಿಶ್ವಿಕಾ, ತರುಣ್ ಸುಧೀರ್ ತೀರ್ಪುಗಾರಿಕೆಯಲ್ಲಿ ನಡೆಯುವ ಈ ಶೋ ಗೆ ಸಿನೆಮಾದಲ್ಲಿ ನಟಿಸಬೇಕೆಂಬ ಕನಸನ್ನು ಹೊತ್ತ ಮಹಿಳೆಯರಿಗೆ ಇದು ವೇದಿಕೆ ಕಲ್ಪಿಸಿಕೊಡುತ್ತಿದೆ.
ಈಗಾಗಲೇ ಝೀ ಕನ್ನಡದ ಸಾಮಾಜಿಕ ಜಾಲತಾಣದಲ್ಲಿ ಹಲವು ವಿಡಿಯೋಗಳು ಪ್ರಸಾರ ಆಗಿದ್ದು, ಈ ಶೋ ಗೆ ಹಿನ್ನಲೆ ಧ್ವನಿ ಕಲಾವಿದೆ, ಬೆಂಗಳೂರಿನ ಆಶಿಕಾ ಶರ್ಮಾ ಆಯ್ಕೆಯಾಗಿದ್ದಾರೆ.
ರಾಧೆಗೆ ಧ್ವನಿಯಾಗಿದ್ದ ಕಂಠದಾನ ಕಲಾವಿದೆ
ಆಶಿಕಾ ಅವರು ಕಂಠದಾನ ಕಲಾವಿದೆ. ರಾಧಕೃಷ್ಣ ಎಂಬ ಹಿಂದಿ ಧಾರವಾಹಿಯ ಕನ್ನಡ ಅವತರಣಿಕೆಯಲ್ಲಿ ರಾಧೆ ಪಾತ್ರಕ್ಕೆ ಕಂಠದಾನ ಮಾಡಿದವರೇ ಆಶಿಕಾ. ಆ ಮೂಲಕ ತಮ್ಮ ಸುಂದರ ಕಂಠದ ಮೂಲಕವೇ ಜನಮನ್ನಣೆ ಗಳಿಸಿದವರು.
ಇನ್ನು ಚಂದನವನದ ಸುಮಾರು ೨೦೦ ಕ್ಕೂ ಅಧಿಕ ಸಿನೆಮಾಗಳಿಗೆ ವಾಯ್ಸ್ ಓವರ್ ಕೊಟ್ಟಿದ್ದಾರೆ. ಕಿಚ್ಚ ಸುದೀಪ ಅಭಿನಯದ ವಿಕ್ರಾಂತ್ ರೋಣ ಸಿನೆಮಾದಲ್ಲಿ ರಕ್ಕಮ್ಮಗಳಿಗೆ ಧ್ವನಿ ನೀಡಿದ್ದಾರೆ.
ಈಗಾಗಲೇ ಪ್ರಸಾರ ಆಗಿರುವ ಪ್ರೊಮೋದಲ್ಲಿ ಆಶಿಕಾ ಸೆಲೆಕ್ಟ್ ಆಗಿದ್ದಾರೆ. ಆ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಆಲ್ ದಿ ಬೆಸ್ಟ್ ಆಶಿಕಾ